×
Ad

ರಾಷ್ಟ್ರೀಯ ಹೆದ್ದಾರಿ ಸುರಕ್ಷೆಗೆ ಹೆಚ್ಚಿನ ನಿಗಾ ವಹಿಸಿ: ಶಿಲ್ಪಾ ನಾಗ್

Update: 2017-06-15 20:48 IST

ಉಡುಪಿ, ಜೂ.15: ಬೈಂದೂರಿನ ಒತ್ತಿನೆಣೆ ಸೇರಿದಂತೆ ಕುಂದಾಪುರ, ಉಡುಪಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಡಿ ಬರುವ ರಸ್ತೆಗಳು ಮಳೆಯಿಂದಾಗಿ ದುಸ್ಥಿತಿಗೆ ತಲುಪಿದ್ದು, ಪ್ರತಿಯೊಂದು ರಸ್ತೆ ಹಾಗೂ ಭೂಕುಸಿತಗಳ ನಿರ್ವಹಣೆಗೆ ಸಹಾಯಕ ಆಯುಕ್ತೆ ಶಿಲ್ಪಾ ನಾಗ್ ಅವರು ಇಂದು ಸಮಯ ಮಿತಿಯನ್ನು ನಿಗದಿ ಪಡಿಸಿದರು.

ಜನಸಾಮಾನ್ಯರಿಗೆ ಕುಂದಾಪುರ, ಬೈಂದೂರು ವ್ಯಾಪ್ತಿಯಲ್ಲಿ ರಸ್ತೆ ಕೆಲಸ ದಿಂದಾಗಿ ಹೆಚ್ಚಿನ ತೊಂದರೆಯಾಗಿದ್ದು, ಆದಿ ಉಡುಪಿಯಲ್ಲೂ ಮಳೆಗಾಲದ ಆರಂಭದಲ್ಲಿ ನಡೆದ ಕುಸಿತಗಳ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ಅವರು ಅಧಿಕಾರಿಗಳಿಗೆ ತೋರಿಸಿದರು.

ಅಲ್ಲಿ ಪೇರಿಸಿಟ್ಟ ಮಣ್ಣು ಕೃಷಿಕರ ಗದ್ದೆಗೆ ಹರಿದು ಆಗಿರುವ ನಷ್ಟ ಹಾಗೂ ಪಾರ್ವತಿ ಎಂಬವರ ಮನೆಗಾದ ಹಾನಿ, ಇದಕ್ಕೆಲ್ಲ ಕಾಂಟ್ರಾಕ್ಟರ್‌ಗಳೇ ಹೊಣೆ ಹಾಗೂ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದೂ ಸಹಾಯಕ ಆಯುಕ್ತರು ಮಾಹಿತಿ ನೀಡಿದರು.

ಈಗಾಗಲೇ ಜೋಗೂರು, ಮದ್ದೋಡಿ, ಹೆನ್‌ಬೇರ್ ಪ್ರದೇಶದ ರಸ್ತೆಗಳು ವಾಹನಗಳ ಓಡಾಟದಿಂದ ಹಾಳಾಗಿದ್ದು, ಇಲ್ಲಿ ರಸ್ತೆ ಗುಂಡಿ ಮುಚ್ಚಬೇಕು. ಮರವಂತೆಯಲ್ಲಿ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಆದೇಶಿಸಿದರು. ಈಗಾಗಲೇ ಜೋಗೂರು, ಮದ್ದೋಡಿ, ಹೆನ್‌ಬೇರ್ ಪ್ರದೇಶದ ರಸ್ತೆಗಳು ವಾಹನಗಳ ಓಡಾಟದಿಂದ ಹಾಳಾಗಿದ್ದು, ಇಲ್ಲಿ ರಸ್ತೆ ಗುಂಡಿ ಮುಚ್ಚಬೇಕು. ಮರವಂತೆಯಲ್ಲಿ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಆದೇಶಿಸಿದರು. ಪಡುಬಿದ್ರೆಯಲ್ಲಿ ಪರಿಹಾರ ನೀಡುವಲ್ಲಿ ತಾರತಮ್ಯವೆಸಗಿದ ದೂರಿದ್ದು, ಲೋಕೋಪಯೋಗಿ ಇಲಾಖೆಯಿಂದ ಮತ್ತೊಮ್ಮೆ ವೌಲ್ಯಮಾಪನ ನಡೆಸಿ ಆ ವರದಿಯ ಆಧಾರದ ಮೇಲೆ ಯಾರಿಗೂ ಅನ್ಯಾಯವಾಗದಂತೆ ಪರಿಹಾರ ನೀಡಲು ಎಸಿ ಅವರು ಈ ಸಂದರ್ಭದಲ್ಲಿ ಸೂಚನೆಗಳನ್ನು ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಪ್ರಬಂಧಕ ವೈ.ವಿ.ಪ್ರಸಾದ್, ಸ್ಯಾಮ್‌ಸಂಗ್ ವಿಜಯಕುಮಾರ್, ಎ.ಕೆ.ಅಗರವಾಲ್, ಮಲ್ಲಿಕಾರ್ಜುನ್ ಆರ್. ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News