×
Ad

​ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Update: 2017-06-15 20:55 IST

ಮಂಗಳೂರು, ಜೂ.15: ಸರಕಾರವು ಎಸ್ಸಿ/ಎಸ್ಟಿ ಅಡಿ ಒದಗಿಸಲಾದ ಅನುದಾನದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ವಿಶೇಷ ಘಟಕ ಯೋಜನೆ/ಉಪಯೋಜನೆಯಡಿಯಲ್ಲಿ ಲಘು ಮೋಟಾರು ವಾಹನ/ಆಟೊರಿಕ್ಷಾ ವಾಹನಗಳ ಚಾಲನಾ ತರಬೇತಿ ನೀಡಲಾಗುವುದು.

ಮಂಗಳೂರು, ಬಂಟ್ವಾಳ ತಾಲ್ಲೂಕಿನಲ್ಲಿ ವಾಸಿಸುವ ಎಸೆಸೆಲ್ಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಲಘು ಮೋಟಾರು ವಾಹನ ತರಬೇತಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಹಾಗೂ ಆಟೋರಿಕ್ಷಾ ವಾಹನ ತರಬೇತಿಗೆ ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ವಯಸ್ಸಾಗಿರಬೇಕು. 8ನೆ ತರಗತಿ ಪಾಸಾಗಿರಬೇಕು. ಮೋಟಾರು ವಾಹನ ಚಾಲನೆ ಮಾಡಲು ದೈಹಿಕ ಅರ್ಹತೆಯನ್ನು ಹೊಂದಿರಬೇಕು. ಇದರ ಬಗ್ಗೆ ನೋಂದಣಿ ಸರಕಾರಿ ವೈದ್ಯಾಧಿಕಾರಿ ಗಳಿಂದ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು.ಅರ್ಜಿಗಳನ್ನು ಜೂ.20ರೊಳಗೆ ಸಲ್ಲಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News