×
Ad

​ಪಶುಭಾಗ್ಯಕ್ಕೆ ಅರ್ಜಿ ಆಹ್ವಾನ

Update: 2017-06-15 20:57 IST

ಮಂಗಳೂರು, ಜೂ.15: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಪಶುಭಾಗ್ಯ ಮತ್ತು ಪಶುಭಾಗ್ಯ ಯೋಜನೆಯಡಿ ವಿಲೀನಗೊಳಿಸಿರುವ ಅಮೃತ ಯೋಜನೆಯನ್ನು ಅನುಷ್ಠಾನಗೊಳಿಸಲು ದ.ಕ. ಜಿಲ್ಲೆಗೆ ವಿವಿಧ ಘಟಕಗಳಿಗೆ ಗುರಿ ನಿಗದಿಪಡಿಸಲಾಗಿದೆ.

 ದ.ಕ. ಜಿಲ್ಲೆಗೆ ಹೈನುಗಾರಿಕೆ-208, ಕುರಿ/ಮೇಕೆ-29, ಹಂದಿ ಘಟಕ-13, ಮಾಂಸದ ಕೋಳಿ-8 ಹಾಗೂ ಅಮೃತ ಯೋಜನೆ ಹೈನುಗಾರಿಕೆ-36 ಮತ್ತು 3 ಕುರಿ/ಮೇಕೆ -259 ಗುರಿಯನ್ನು ನಿಗದಿಪಡಿಸಲಾಗಿದೆ. ವಿಶೇಷ ಘಟಕ ಯೋಜನೆಯಡಿ ಹೈನುಗಾರಿಕೆ-12, ಕುರಿ/ಮೇಕೆ-7, ಹಂದಿ ಘಟಕ-3, ಹಾಗೂ ಗಿರಿಜನ ಉಪಯೋಜನೆಯಡಿ ಹೈನುಗಾರಿಕೆ-2, ಕುರಿ/ಮೇಕೆ-4, ಹಂದಿ ಘಟಕ-1 ಗುರಿ ನಿಗದಿಯಾಗಿದೆ.

ಈ ಯೋಜನೆಯನ್ನು ಬೇಡಿಕೆ ಆಧಾರಿತ ಯೋಜನೆಯಾಗಿ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಇಲಾಖೆಯಲ್ಲಿ ಲಭ್ಯವಿರುವ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುವುದು. ಪ.ಜಾ ಮತ್ತು ಪ.ಪಂ ಫಲಾನುಭವಿಗಳಿಗೆ ಆಯಾ ಘಟಕ ವೆಚ್ಚದ ಶೇ.50 ಸಹಾಯಧನವನ್ನು ಹಾಗೂ ಇತರೆ ಫಲಾನುಭವಿಗಳಿಗೆ ಶೇ.25 ಸಹಾಯಧನವನ್ನು ನೇರವಾಗಿ ಸಾಲ ಮಂಜೂರು ಮಾಡುವ ಹಣಕಾಸು ಸಂಸ್ಥೆಗಳು/ಬ್ಯಾಂಕ್‌ಗಳಿಗೆ ಪಾವತಿಸಲಾಗುವುದು.

ಈ ಯೋಜನೆಯಲ್ಲಿ 3 ಕುರಿ/ಮೇಕೆ ಘಟಕ ಇದ್ದು, ಈ ಘಟಕದಡಿ ಪ.ಜಾ ಮತ್ತು ಪ.ಪಂಗಡದ ಮಹಿಳಾ ಫಲಾನುಭವಿಗಳಿಗೆ ಶೇ.90 ರಷ್ಟು ಸಹಾಯಧನ ಹಾಗೂ ಇತರೆ ವರ್ಗದ ಮಹಿಳಾ ಫಲಾನುಭವಿಗಳಿಗೆೆ ಶೇ.75ರಷ್ಟು ಸಹಾಯಧನ ನೀಡಲಾಗುತ್ತದೆ.

ಭೂಹಿಡುವಳಿರಹಿತ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ನಮೂನೆಗಾಗಿ ಆಯಾ ತಾಲೂಕಿನ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರುಗಳನ್ನು ಸಂಪರ್ಕಿಸಬಹುದು. ಪಶುಭಾಗ್ಯ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ತರಬೇತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಭರ್ತಿ ಮಾಡಿದ ಅರ್ಜಿಯನ್ನು ಪೂರಕ ದಾಖಲೆಗಳೊಂದಿಗೆ ಆಯಾ ತಾಲೂಕಿನ ಸಹಾಯಕ ನಿರ್ದೇಶಕರುಗಳಿಗೆ ಜು.15ರೊಳಗಾಗಿ ಸಲ್ಲಿಸಬೇಕು ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಕೀಯಸೇವಾ ಇಲಾಖೆ, ಮಂಗಳೂರು ಇವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News