ಸೂಕ್ತ ಭದ್ರತೆಗೆ ಇಮಾಮ್ ಕೌನ್ಸಿಲ್ ಮನವಿ
Update: 2017-06-15 21:01 IST
ಮಂಗಳೂರು, ಜೂ.15: ದ.ಕ.ಜಿಲ್ಲೆಯಲ್ಲಿ ರಮಝಾನ್ ಉಪವಾಸ ಪ್ರಾರಂಭದಲ್ಲೇ ಕಲ್ಲಡ್ಕ ಮತ್ತಿತರ ಕಡೆ ಅಹಿತಕರ ಘಟನೆ ನಡೆದಿರುವುದರಿಂದ ಮುಸ್ಲಿಂ ಸಮುದಾಯ ಭಯದ ವಾತಾವರಣದಲ್ಲಿ ಕಳೆಯುತ್ತಿದೆ. ರಮಝಾನ್‌ನಲ್ಲಿ ರಾತ್ರಿ ಹೊತ್ತು ವಿಶೇಷ ಪ್ರಾರ್ಥನೆಗೆ ಮಸೀದಿಗೆ ತೆರಳಲು ಅಸಾಧ್ಯವಾದಂತಹ ಪರಿಸ್ಥಿತಿ ಇದೆ. ಆ ಹಿನ್ನಲೆಯಲ್ಲಿ ಮಸೀದಿಗೆ ತೆರಳುವ ಮುಸ್ಲಿಮರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ದ.ಕ.ಜಿಲ್ಲಾ ಇಮಾಮ್ ಕೌನ್ಸಿಲ್ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಕಲ್ಲಡ್ಕ ಪರಿಸರದಲ್ಲಿ ಪದೇ ಪದೇ ಚೂರಿ ಇರಿತ, ಹಲ್ಲೆ, ಕಲ್ಲು ತೂರಾಟ ಘಟಿಸುತ್ತಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುವ ಕೋಮುವಾದಿ ಸಂಘಟನೆಗಳ ನಾಯಕರನ್ನು ಬಂಧಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಕೌನ್ಸಿಲ್ ಒತ್ತಾಯಿಸಿದೆ.