ಸಂಶಯದ ಮೇಲೆ ಸೆರೆ
Update: 2017-06-15 21:26 IST
ಮಂಗಳೂರು, ಜೂ.15: ನಗರದ ಹಂಪನಕಟ್ಟೆಯ ಭೂಷಣ್ ಬಾರ್ ಬಳಿ ವ್ಯಕ್ತಿಯೊಬ್ಬ ಸಂಶಯಾಸ್ಪದ ರೀತಿಯಲ್ಲಿ ಠಳಾಯಿಸುತ್ತಿದ್ದು, ಪೊಲೀಸರನ್ನು ಕಂಡು ಓಡಿ ಹೋಗಲು ಯತ್ನಿಸಿದ ಹಿನ್ನಲೆಯಲ್ಲಿ ಬಂದರು ಪೊಲೀಸರು ವಶಕ್ಕೆ ತೆಗೆದು ಪ್ರಕರಣ ದಾಖಲಿಸಿದ್ದಾರೆ.
ಬಂದರ್ ಠಾಣೆಯ ಹೆಚ್‌ಸಿಗಳಾದ ಜಾರ್ಜ್ ವ್ಯಾಲೆಸ್ಟಿನ್ ಡಿಸೋಜ ಮತ್ತು ದಯಾನಂದ ಅವರು ಜೂ.14ರ ರಾತ್ರಿ 1:30ಕ್ಕೆ ಕರ್ತವ್ಯದಲ್ಲಿದ್ದಾಗ ಕಾಞಂಗಾಡಿನ ವಿನೋದ್ ಕುಮಾರ್ (46) ಎಂಬಾತ ಪೊಲೀಸರನ್ನು ಕಂಡು ತಪ್ಪಿಸಲು ಯತ್ನಿಸಿ ಬಳಿಕ ಪೊಲೀಸರ ವಶವಾಗಿದ್ದಾನೆ.