ನದಿಯಲ್ಲಿ ಮುಳುಗಿ ಕೃಷಿಕ ಮೃತ್ಯು
Update: 2017-06-15 21:54 IST
ಕೋಟ, ಜು.15: ಕೃಷಿಕರೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಶಿರಿಯಾರ ಗ್ರಾಮದ ಕಳ್ಳಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಕಳ್ಳಾಡಿಯ ವೈಕುಂಠ ಮೊಗವೀರ (60) ಎಂದು ಗುರುತಿಸ ಲಾಗಿದೆ.
ಇವರು ಮನೆ ಸಮೀಪದ ಗದ್ದೆಯಲ್ಲಿ ಕೃಷಿ ಕೆಲಸಕ್ಕೆಂದು ಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು, ಬಳಿಕ ಹುಡುಕಾಡಿದಾಗ ಗದ್ದೆ ಬದಿಯಲ್ಲಿ ರುವ ಕಲ್ಲಾಡಿ ನದಿಯಲ್ಲಿ ಇವರ ಮೃತದೇಹ ಪತ್ತೆಯಾಯಿತು.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.