×
Ad

ಡಿವೈಡರ್ ಮೇಲೇರಿ ಕಾರು ಢಿಕ್ಕಿ: ವಿದ್ಯಾರ್ಥಿನಿಗೆ ಗಾಯ

Update: 2017-06-15 21:59 IST

ಉಡುಪಿ, ಜು.15: ಕಿನ್ನಿಮುಲ್ಕಿ ಕಾಂಚಾನ ಹುಂಡೈ ಶೋರೂಂನ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಸಂಜೆ ವೇಳೆ ಕಾರೊಂದು ಡಿವೈಡರ್ ಮೇಲೇರಿ ಬಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಕಪ್ಪೆಟ್ಟು ನಿವಾಸಿ ಅಶ್ಮಿತಾ (17) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿ ಎಂಜಿಎಂ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಅಶ್ಮಿತಾ ಕಾಲೇಜಿನಿಂದ ಬಸ್ಸಿನಲ್ಲಿ ಬಂದು ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದರು. ಇದೇ ಸಮಯಕ್ಕೆ ಅಂಬಲಪಾಡಿ ಕಡೆಯಿಂದ ಉದ್ಯಾವರ ಕಡೆಗೆ ಹೋಗುತ್ತಿದ್ದ ದೆಹಲಿಯ ಕಾರು, ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮೇಲೇರಿತು. ಆಗ ಅಲ್ಲೇ ರಸ್ತೆ ದಾಟುತ್ತಿದ್ದ ಅಶ್ಮಿತಾಳಿಗೆ ಕಾರು ಢಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News