ಇನೋಳಿ: ಬಿ.ಸೈಟ್ ಮದರಸದಲ್ಲಿ ಇಫ್ತಾರ್ ಕೂಟ

Update: 2017-06-15 16:37 GMT

ಕೊಣಾಜೆ, ಜೂ. 15: ವೃತ ಅನುಷ್ಠಾನ ಮಾಡುವುದರ ಜೊತೆ ಇಫ್ತಾರ್ ಕೂಟ ಅಯೋಜಿಸಿದರೆ ದುಪ್ಪಟ್ಟು ಪ್ರತಿಫಲ ದೊರಯಲು ಸಾಧ್ಯ ಎಂದು ಇನೋಳಿ ಬಿಸೈಟ್ ಮದರಸದ ಅಧ್ಯಾಪಕ ಅಶ್ರಫ್ ಮುಸ್ಲಿಯಾರ್ ಅಭಿಪ್ರಾಯಪಟ್ಟರು.

ಇನೋಳಿ ಬಿ.ಸೈಟ್ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ನಡೆದ ಸಾಮೂಹಿಕ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು.

ಇಫ್ತಾರ್ ಕರೆ ನೀಡಿದಾಗ ಭಾಗವಹಿಸುವವನಿಗೆ ವೃತಾಚರಣೆಯ ಯಾವುದೇ ಪ್ರತಿಫಲ ಕಡಿತವಾಗದು. ಇಂತಹ ಕೂಟಗಳು ಪ್ರತಿಯೊಂದು ಮಸೀದಿ, ಮದರಸಾಗಳಲ್ಲಿ ನಡೆದರೆ ಸಾಮೂಹಿಕ ನಮಾಝ್ ನಲ್ಲಿ ಭಾಗವಹಿಸುವ ಅವಕಾಶವೂ ಸಿಗಲಿದೆ. ಇನ್ನುಳಿದ ಹತ್ತು ವೃತವನ್ನು ಇನ್ನಷ್ಟು ಶ್ರದ್ಧಾ ಭಕ್ತಿಯಿಂದ ಅನುಷ್ಠಾನಿಸಿ ಪಾಪಗಳಿಂದ ಮುಕ್ತರಾಗಲು ಪ್ರಯತ್ನಿಸಬೇಕಿದೆ ಎಂದು ಹೇಳಿದರು.

ಇನೋಳಿ ಜಾಮಿಯಾ ಮುಬಾರಕ್ ಜುಮಾ ಮಸೀದಿಯ ಗೌರವಾಧ್ಯಕ್ಷ ಅಬ್ದುಲ್ ಖಾದರ್, ಅಧ್ಯಕ್ಷ ಹುಸೈನ್ ಕಡವು, ಸಲಹೆಗಾರ ಟಿ.ಎಚ್.ಅಬ್ಬಾಸ್, ಕಾರ್ಯದರ್ಶಿ ಶಬೀರ್ ಎ.ಸೈಟ್, ಜತೆ ಕಾರ್ಯದರ್ಶಿ ಅನ್ಸಾರ್ ಮುಕ್ರಿ, ಸದಸ್ಯರಾದ ಇಕ್ಬಾರ್ ಕಕ್ಕೆಬೆಟ್ಟು, ಅಕ್ರಂ ಬಿ.ಸೈಟ್, ಕಾರ್ಯಕ್ರಮ ಅಯೋಜಕ ಟಿ.ಎಚ್.ನಝೀರ್, ಬಿ.ಸೈಟ್ ಹಿದಾಯತುಲ್ ಇಸ್ಲಾಂ ಮದರಸ ಅಧ್ಯಕ್ಷ ಐ.ಬಿ.ಸಾದಿಕ್, ಎಸ್‌ಡಿಪಿಐ ದೇರಳಕಟ್ಟೆ ಘಟಕ ಕಾರ್ಯದರ್ಶಿ ಶಾಹೀದ್, ಫಾರೂಕ್ ಪೊರ್ಸೋಟ, ಇಸ್ಮಾಯಿಲ್ ಮೋನು, ಅಬೂಬಕ್ಕರ್, ಬಶೀರ್ ದಿಡಿಂಜ, ಅನ್ವರ್ ಹುಸೈನ್ ಬಿ.ಸೈಟ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News