ಸಾಮಾಜಿಕ ಜಾಲಾತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆರೋಪಿ ಸೆರೆ
Update: 2017-06-15 22:39 IST
ಭಟ್ಕಳ, ಜೂ. 15: ಪವಿತ್ರ ಕಾಬಾ ಭವನವನ್ನು ಆಕ್ಷೇಪಾರ್ಹವಾಗಿ ಚಿತ್ರಿಸಿ ಫೆಸ್‍ಬುಕ್ ಹಾಗೂ ವಾಟ್ಸಪ್ ಗಳಲ್ಲಿ ಪ್ರಚಾರ ಪಡಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಹೊನ್ನಾವರ ತಾಲೂಕಿನ ವಟ್ಕೆ ಶೀರೂರು ಗ್ರಾಮದ ನಿವಾಸಿ ಜೈವಂತ ನಾಯ್ಕ ಎಂದು ಗುರುತಿಸಲಾಗಿದೆ.
ಈತ ಜೂ.12ರಂದು ಪವಿತ್ರ ಕಾಬಾ ಭವನವನ್ನುತಿರುಚಿ ಸಾಮಾಜಿಕ ಜಾಲಾತಾಣದಲ್ಲಿ ಪ್ರಚಾರಪಡಿಸಿದ್ದು, ಇದರಿಂದಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಿ ಹೊನ್ನಾವರ ಹಾಗೂ ಮುರ್ಡೇಶ್ವರದಲ್ಲಿ ವಿವಿಧ ಮುಸ್ಲಿಮ್ ಸಂಘಟನೆಗಳು, ಯುವಕ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ ವಿಷಯವನ್ನು ಭಟ್ಕಳ ಡಿವೈಎಸ್ಪಿಯವರ ಗಮನಕ್ಕೂ ತರಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತಗೊಂಡ ಹೊನ್ನಾವರ ಪೊಲೀಸರು ಜೈವಂತ ನಾಯ್ಕ ವಿರುದ್ಧ ಧಾರ್ಮಿಕ ಭಾವನೆ ಕೆರಳಿಸಿದ ಆರೋಪದಡಿ ಬಂಧಿಸಿ ಕ್ರಮ ಜರಗಿಸಿದ್ದಾರೆ.