ಕಲ್ಲಡ್ಕ ಘರ್ಷಣೆ: ಒಟ್ಟು 10 ಪ್ರಕರಣಗಳು ದಾಖಲು

Update: 2017-06-15 17:16 GMT

ಬಂಟ್ವಾಳ, ಜೂ. 15: ಕಲ್ಲಡ್ಕ ಮತ್ತು ಮೆಲ್ಕಾರ್‌ನಲ್ಲಿ ನಡೆದ ಚೂರಿ ಇರಿತ ಹಾಗೂ ಕಲ್ಲಡ್ಕದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಒಟ್ಟು 10 ಪ್ರಕರಣ ದಾಖಲಾಗಿದ್ದು 18 ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

10 ಪ್ರಕರಣ ಮತ್ತು ಬಂಧಿತ ವಿವರ:

1: ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್ಸೈ ಎ.ಕೆ. ರಕ್ಷಿತ್ ಐಪಿಸಿ ಕಲಂ 143, 147, 148, 504, 333, 324, 353, 427, 153(ಎ), 149 ಅಡಿಯಲ್ಲಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಇಸ್ಮಾಯೀಲ್, ಮುಹಮ್ಮದ್ ಖಮಾಲ್, ಮುಹಮ್ಮದ್ ಇಮ್ತಿಯಾಝ್, ಝೈನುದ್ದೀನ್, ಜಾಫರ್, ಝಮೀರ್, ಮುಹಮ್ಮದ್ ಸಮದ್, ಆಸೀಫ್, ಜುನೈದ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

2: ಸಮದ್ ನೀಡಿರುವ ದೂರಿನಂತೆ ಐಪಿಸಿ ಕಲಂ 341, 324, 504, 34 ಅಡಿಯಲ್ಲಿ ದೂರು ದಾಖಲಾಗಿದೆ.

3: ಸಿರಾಜುದ್ದೀನ್ ನೀಡಿದ ದೂರಿನಂತೆ ಐಪಿಸಿ ಕಲಂ 143, 147, 148, 504, 324, 153(ಎ), 149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದಲ್ಲಿ ಪ್ರದೀಪ್, ಪ್ರಕಾಶ್, ಕಿರಣ್, ಗಣೇಶ್ ಕೆ., ಲತೀಶ್, ಪ್ರಕಾಶ್, ಜಗದೀಶ, ಜಗದೀಶ, ಕುಮಾನ್ ಲಕ್ಷಣ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಿದೆ.

4: ಇಬ್ರಾಹೀಂ ಖಲೀಲ್ ನೀಡಿರುವ ದೂರಿನಂತೆ ಐಪಿಸಿ ಕಲಂ 504, 324, 323, 307, 153(ಎ),34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

5: ರತ್ನಾಕರ್ ಶೆಟ್ಟಿ ನೀಡಿದ ದೂರಿನಂತೆ ಐಪಿಸಿ ಕಲಂ 143, 147, 148, 504, 323, 324, 307, 153(ಎ), 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

6: ಪವನ್ ರಾಜ್ ನೀಡಿರುವ ದೂರಿನಂತೆ ಐಪಿಸಿ ಕಲಂ 143, 144, 147, 324, 307, 153(ಎ), 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

7: ಕಲ್ಲಡ್ಕ ಶ್ರೀರಾಮ ಮಂದಿರದ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ನೀಡಿರುವ ದೂರಿನಂತೆ ಐಪಿಸಿ ಕಲಂ 143, 147, 148, 447, 427, 504, 506, 153(ಎ) ಪ್ರಕರಣ ದಾಖಲಾಗಿದೆ.

8: ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಜಿ.ಅಬೂಬಕ್ಕರ್ ನೀಡಿರುವ ದೂರಿನಂತೆ ಐಪಿಸಿ ಕಲಂ 143, 147, 148, 427, 153(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

9: ತಾರನಾಥ ನೀಡಿದ ದೂರಿನಂತೆ ಐಪಿಸಿ ಕಲಂ 143, 147, 148, 506,427, 153(ಎ) ಪ್ರಕರಣ ದಾಖಲಾಗಿದೆ.

10: ವಿಟ್ಲ ಪೊಲೀಸ್ ಠಾಣೆಯ ಎಸ್ಸೈ ಧನಂಜಯ ನೀಡಿದ ದೂರಿನಂತೆ ಐಪಿಸಿ ಕಲಂ 143, 147, 148, 353, 504, 506, 332, 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News