ಪ್ರೀತಿಸುವುದಿಲ್ಲ ಎಂದ ಯುವತಿಗೆ ಹಾಡಹಗಲೇ ಥಳಿಸಿದ ಯುವಕ: ವೀಡಿಯೊ ವೈರಲ್

Update: 2017-06-16 12:22 GMT

ಲಕ್ನೊ,ಜೂ. 16: ಉತ್ತರ ಪ್ರದೇಶದಲ್ಲಿ ಹಾಡಹಗಲೇ ಯುವತಿಯೊಬ್ಬಳಿಗೆ ಹೊಡೆದದ್ದಕ್ಕಾಗಿ ಯುವಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಪಿಲಿಬಿತ್ ಜಿಲ್ಲೆಯಲ್ಲಿ ಘಟನೆನಡೆದಿದ್ದು, ಯುವತಿಯ ಗೆಳತಿಯೆಂದು ಕಂಡುಬರುತ್ತಿದ್ದ ಇನ್ನೊಬ್ಬಳು ಯುವತಿ ಅವರ ಸಂಗಡ ಇದ್ದಾಳೆ. ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯಗಳು ದಾಖಲಾಗಿದ್ದು, ಯುವಕನನ್ನು ಪ್ರೇಮಿಸಲು ನಿರಾಕರಿಸಿದ್ದು, ಆತನ ಕೋಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

 ಉತ್ತರಪ್ರದೇಶದಲ್ಲಿ ಮಹಿಳೆಯರ ವಿರುದ್ಧ ದಾಳಿಕೃತ್ಯಗಳು ಹೆಚ್ಚುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳು ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಿದ್ದವು. ಕಳೆದ ಅಖಿಲೇಶ್ ಯಾದವ್ ಸರಕಾರ ಮಹಿಳೆಯರ ವಿರುದ್ಧ ದೌರ್ಜನ್ಯಕ್ಕಾಗಿ ಹೆಚ್ಚು ಟೀಕೆಗೊಳಗಾಗಿತ್ತು.

 ನಂತರ ಅಧಿಕಾರಕ್ಕೆ ಬಂದ ಆದಿತ್ಯನಾಥ್ ಸರಕಾರ ಮಹಿಳಾ ಭದ್ರತೆಗಾಗಿ ವಿಶೇಷ ಪೊಲೀಸ್‌ವಿಭಾಗವನ್ನೇ ರೂಪಿಸಿತ್ತು. ಇದು ಮಾಲ್‌ಗಳು, ಕಾಲೇಜುಗಳು, ರಸ್ತೆಗಳಲ್ಲಿ ಬಿಗು ತಪಾಸಣೆ ನಡೆಸಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News