×
Ad

ಉಳ್ಳಾಲ: ಕಡಲ್ಕೊರೆತ ತಡೆ ಕಾಮಗಾರಿಯ ಟಿಪ್ಪರ್ ಪಲ್ಟಿ

Update: 2017-06-16 18:27 IST

ಉಳ್ಳಾಲ, ಜೂ. 16: ಕಡಲ್ಕೊರೆತ ತಡೆ ಕಾಮಗಾರಿಗೆ ಶುಕ್ರವಾರ ಮಧ್ಯಾಹ್ನ ಕಲ್ಲುಗಳನ್ನು ಹೊತ್ತು ತಂದಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಉಳ್ಳಾಲ ಕೈಕೋ ಸಮುದ್ರ ತೀರದಲ್ಲಿ ನಡೆದಿದೆ. ಟಿಪ್ಪರ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾರೆ.

ಉಳ್ಳಾಲದ ಕೈಕೋ ಸಮುದ್ರ ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡ ನಿಟ್ಟಿನಲ್ಲಿ ಈಗಾಗಲೇ ತಡೆಗೋಡೆ ಕಾಮಗಾರಿಯು ನಡೆಯುತ್ತಿದ್ದು, ಕಾಮಗಾರಿಗೆ ಬೃಹದಾಕಾರಾದ ಕಲ್ಲುಗಳನ್ನು ಟಿಪ್ಪರ್ ಒಂದರಲ್ಲಿ ಶುಕ್ರವಾರ ಮಧ್ಯಾಹ್ನ ತಂದಿದ್ದರೆನ್ನಲಾ ಗಿದೆ. ಕಲ್ಲುಗಳನ್ನು ಸಮುದ್ರ ಕಿನಾರೆಯಲ್ಲಿ ಖಾಲಿಮಾಡಿ ಲಾರಿ ಹಿಂತಿರುಗುವಾಗ ಲಾರಿಯ ಚಕ್ರವೊಂದು ಕಲ್ಲಿನ ಮೇಲೇರಿ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ್ದು ಇದರಿಂದ ಲಾರಿ ಪಲ್ಟಿಯಾಯಿತು ಎಂದು ತಿಳಿದುಬಂದಿದೆ.
 

ತಡೆಗೋಡೆಯ ಸಮೀಪದಲ್ಲೇ ಟಿಪ್ಪರ್  ಪಲ್ಟಿಯಾಗಿದ್ದು ಸ್ವಲ್ಪ ವ್ಯತ್ಯಾಸವಾಗಿದ್ದರೆ ಟಿಪ್ಪರ್ ಮತ್ತು ಚಾಲಕ ಕಡಲು ಪಾಲಾಗುವ ಸಂಭವವಿತ್ತು.

ಘಟನೆಯಿಂದ ಉತ್ತರ ಭಾರತ ಮೂಲದ ಚಾಲಕ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News