×
Ad

ಪಾಕ್ ದಾಳಿಗೆ ಓರ್ವ ಭಾರತೀಯ ಯೋಧ ಮೃತ್ಯು

Update: 2017-06-16 18:34 IST

ಜಮ್ಮುಕಾಶ್ಮೀರ, ಜೂ. 16: ಜಮ್ಮುಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಗಡಿರೇಖೆಗುಂಟ ಪಾಕಿಸ್ಥಾನ ನಡೆಸಿದ ಶೆಲ್ ದಾಳಿಯಿಂದ ಓರ್ವ ಯೋಧ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದಾರೆ.

 ಮೃತಪಟ್ಟ ಯೋಧ 8 ಸಿಕ್ಖ್ ಲೈಟ್ ಇನ್‌ಫೆಟ್ರಿಯ ನಾಯಕ್ ಹಾಗೂ ಪಂಜಾಬ್‌ನ ಹೋಸಿಯಾರ್‌ಪುರ್ ಜಿಲ್ಲೆಯ ಹಾಜಿಪುರ್ ಗ್ರಾಮದ ನಿವಾಸಿ ಭಕ್ತಾವರ್ ಸಿಂಗ್ ಎಂದು ಗುರುತಿಸಲಾಗಿದೆ.

ಪಾಕಿಸ್ಥಾನ ಸೇನೆ ಗಡಿರೇಖೆಯಲ್ಲಿ ಬೆಳಗ್ಗೆ 4 ಗಂಟೆಗೆ ಗುಂಡಿನ ದಾಳಿ ನಡೆಸಿತು. ಭಾರತದ ಯೋಧರು ಕೂಡ ಪ್ರತಿ ದಾಳಿ ನಡೆಸಿದರು. ಈ ಗುಂಡಿನ ಚಕಮಕಿ ಸುಮಾರು 20 ನಿಮಿಷಗಳ ಕಾಲ ನಡೆಯಿತು. ಈ ಗುಂಡಿನ ಚಕಮಕಿಯಲ್ಲಿ ಭಾರತದ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಇವರಲ್ಲಿ ಓರ್ವ ಬೆಳಗ್ಗೆ 5 ಗಂಟೆ ಹೊತ್ತಿಗೆ ಮೃತಪಟ್ಟರು ಎಂದು ಬೇಹುಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ, ಸೇನೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News