ಮಧ್ಯಪ್ರದೇಶದಲ್ಲಿ ಶೇ.30ರಷ್ಟು ಮಹಿಳೆಯರಿಗೆ ಸಂತಾನ ನಿಯಂತ್ರಣ ವಿಧಾನಗಳ ಅರಿವೇ ಇಲ್ಲ!

Update: 2017-06-16 13:50 GMT

ಭೋಪಾಲ,ಜೂ.16: ಮಧ್ಯಪ್ರದೇಶದ ಶೇ.30ರಷ್ಟು ಮಹಿಳೆಯರಿಗೆ ಸಂತಾನ ನಿಯಂತ್ರಣ ವಿಧಾನಗಳ ಅರಿವೇ ಇಲ್ಲ ಎಂದು ಭಾರತೀಯ ಕುಟುಂಬ ಯೋಜನೆ ಸಂಸ್ಥೆ (ಎಫ್‌ಪಿಎಐ)ಯು ಹೇಳಿದೆ.

ಮಧ್ಯಪ್ರದೇಶದಲ್ಲಿ ಕುಟುಂಬ ಕಲ್ಯಾಣ ಯೋಜನೆಗಳ ಸ್ಥಿತಿಗತಿಯ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಎಫ್‌ಪಿಎಐ ಅಧ್ಯಕ್ಷೆ ಡಾ.ಮಮತಾ ಮಿಶ್ರಾ ಅವರು, ಈ ಮಹಿಳೆಯರಿಗೆ ಸಂತಾನ ನಿಯಂತ್ರಣ ಕುರಿತು ಮಾಹಿತಿಗಳು ತಲುಪುತ್ತಿಲ್ಲ ಎಂದರು.

 ಕುಟುಂಬ ಯೋಜನೆಯು ಪ್ರಾಥಮಿಕ ಆರೋಗ್ಯ ರಕ್ಷಣೆ ಮತ್ತು ಪ್ರಜನನ ಸ್ವಾಸ್ಥವನ್ನು ಉತ್ತೇಜಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದ ಅವರು, ಹೆಚ್ಚುತ್ತಿರುವ ಜನಸಂಖ್ಯೆ ಬಗ್ಗೆ ಜನರಲ್ಲಿ ಜಾಗ್ರತಿಯನ್ನು ಮೂಡಿಸುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರವನ್ನು ನಿರ್ವಹಿಸಬಹುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News