ಇನ್ಫೋಸಿಸ್ ತೊರೆದ ಸಂದೀಪ್ ದಾದ್ಲಾನಿ
Update: 2017-06-16 19:25 IST
ಹೊಸದಿಲ್ಲಿ,ಜೂ.16: ಪ್ರಮುಖ ಐಟಿ ಕಂಪನಿ ಇನ್ಫೋಸಿಸ್‌ನ ಅಮೆರಿಕ ವಿಭಾಗದ ಅಧ್ಯಕ್ಷ ಸಂದೀಪ್ ದಾದ್ಲಾನಿ ಅವರು ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬೆಳವಣಿಗೆಯನ್ನು ಇನ್ಫೋಸಿಸ್‌ಗೆ ಹಿನ್ನಡೆ ಎಂದು ಪರಿಗಣಿಸಲಾಗಿದೆ.
ಲಿಂಕ್ಡ್‌ಇನ್‌ಗೆ ಸೇರಲು ಇನ್ಫೋಸಿಸ್‌ಗೆ ತನ್ನ ವಿದಾಯವನ್ನು ಪ್ರಕಟಿಸಿರುವ ದಾದ್ಲಾನಿ,ತನ್ನ ವೈಯಕ್ತಿಕ ಆಸಕ್ತಿಗಳನ್ನು ಬೇರೆಡೆಗೆ ಅರಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಸಂದೀಪ್ ಇನ್ಫೋಸಿಸ್‌ನ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅವರ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇವೆ ಎಂದು ಇನ್ಫೋಸಿಸ್‌ನ ಸಿಇಒ ವಿಶಾಲ್ ಸಿಕ್ಕಾ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.