ಕ್ಯಾನ್ಸರ್ ಔಷಧಿ: ರೋಶ್ ವಿರುದ್ಧ ಮೇಲ್ಮನವಿ ವಾಪಸ್ ಪಡೆದ ಸಿಪ್ಲಾ

Update: 2017-06-16 14:11 GMT

ಹೊಸದಿಲ್ಲಿ,ಜೂ.16: ಶ್ವಾಸಕೋಶ ಕ್ಯಾನ್ಸರ್ ನಿಗ್ರಹ ಔಷಧಿಗೆ ಸಂಬಂಧಿಸಿದಂತೆ ಸ್ವಿಸ್ ಫಾರ್ಮಾ ಕಂಪನಿ ಹಾಫ್‌ಮನ್ ಲಾ ರೋಶ್ ಲಿ.ವಿರುದ್ಧ ತಾನು ಸಲ್ಲಿಸಿದ್ದ ಮೇಲ್ಮನವಿ ಯನ್ನು ವಾಪಸ್ ಪಡೆಯಲು ಭಾರತೀಯ ಕಂಪನಿ ಸಿಪ್ಲಾಕ್ಕೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅನುಮತಿಯನ್ನು ನೀಡಿತು. ಇತ್ತೀಚಿಗೆ ಇವೆರಡೂ ಕಂಪನಿಗಳು ವಿವಾದವನ್ನು ತಮ್ಮಾಳಗೆ ಬಗೆಹರಿಸಿಕೊಂಡಿದ್ದವು.

ಎರ್ಲೊಟಿನಿಬ್ ಹೈಡ್ರೋಕ್ಲೋರೈಡ್ ಔಷಧಿಯ ಪೇಟೆಂಟ್ ಕುರಿತಂತೆ ಇವೆರಡು ಕಂಪನಿಗಳ ನಡುವೆ ವಿವಾದ ಹುಟ್ಟಿಕೊಂಡಿತ್ತು. ರೋಶ್ ಇದನ್ನು ಟಾರ್ಸೆವಾ ಮತ್ತು ಸಿಪ್ಲಾ ಎರ್ಲೊಸಿಪ್ ಹೆಸರುಗಳಲ್ಲಿ ತಯಾರಿಸುತ್ತಿವೆ.

ಈ ಔಷಧಿಗಾಗಿ ರೋಶ್ ಪಡೆದುಕೊಂಡಿರುವ ಪೇಟೆಂಟ್‌ನ್ನು ಸಿಪ್ಲಾ ಉಲ್ಲಂಘಿಸಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು 2015,ನ.27ರಂದು ತೀರ್ಪು ನೀಡಿದ್ದು, ಇದನ್ನು ಪ್ರಶ್ನಿಸಿ ಸಿಪ್ಲಾ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು.

ತಮ್ಮ ನಡುವಿನ ಪೇಟೆಂಟ್ ವಿವಾದಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದ ಉಭಯ ಕಂಪನಿಗಳು ಮೇ 30ರಂದು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅದನ್ನು ಇತ್ಯರ್ಥಗೊಳಿಸಿ ಕೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News