ಅಶಕ್ತರಿಗಾಗಿ ಮೊಬೈಲ್ ನಿಯಂತ್ರಿತ ಗಾಲಿ ಕುರ್ಚಿ

Update: 2017-06-16 14:25 GMT

ಶಿರ್ವ, ಜೂ.16: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳು ಮೊಬೈಲ್ ನಿಯಂತ್ರಿತ ಗಾಲಿ ಕುರ್ಚಿಯನ್ನು ವಿನ್ಯಾಸಗೊಳಿಸಿದ್ದು, ಅದನ್ನು ಬಳಸುವ ವ್ಯಕ್ತಿಯೇ ಆ ಕುರ್ಚಿಯನ್ನು ನಿಯಂತ್ರಿಸಿ ತಾನು ಬಯಸಿದೆಡೆ ಅದು ಚಲಿಸುವಂತೆ ಮಾಡಬಹುದಾಗಿದೆ.

ಬ್ಯಾಟರಿ ಮತ್ತು ಮೋಟಾರ್‌ಗಳನ್ನೊಳಗೊಂಡ ಗಾಲಿಕುರ್ಚಿಯು ಒಂದು ಭಾಗವಾದರೆ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ವ್ಯಕ್ತಿಯು ತನ್ನ ಆಯ್ಕೆಯನ್ನು ಆಯ್ದುಕೊಳ್ಳುವ ಮತ್ತು ಆ ಮೂಲಕ ಗಾಲಿಕುರ್ಚಿಯನ್ನು ನಿಯಂತ್ರಿಸಬಲ್ಲ ತಂತ್ರಾಂಶ ಇನ್ನೊಂದು ವಿಭಾಗ. ಚಲನಶೀಲ ಗಾಲಿಗಳು, ಪಾದಾಧಾರ, ಬೆನ್ನಿಗೆ ಆಧಾರಗಳನ್ನು ಹೊಂದಿರುವ ಗಾಲಿ ಕುರ್ಚಿಯ ನಿಯಂತ್ರಣ ಸಂಪೂರ್ಣವಾಗಿ ಆಂಡ್ರಾಯ್ಡಾ ಆಧಾರಿತ ಉಪಕರಣದ ಮೂಲಕವೇ ಆಗುತ್ತದೆ. ನಿರ್ದಿಷ್ಟ ಅಂತರದಲ್ಲಿ ನಿಸ್ತಂತು ಸಂಪರ್ಕದ ಮೂಲಕ ನಿಯಂತ್ರಣ ಸಾಧ್ಯವಾಗುವುದರಿಂದ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಇದನ್ನು ಬಳಸಬಹುದು.

ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರಿಯಾಂಕಾ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ದೀಕ್ಷಾ ಕಿಣಿ, ಕೆ.ಮೇಧಿನಿ, ಲವ್‌ಲಿಯಾ ಮೇಬಲ್ ಡಿಸೋಜ, ನಂದಿತಾ ರಾವ್ ಕಿದಿಯೂರ್ ಈ ಉಪಕರಣವನ್ನು ಅಭಿವೃದ್ಧಿ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News