ಬಿಎಸ್ಸಿ ಆಪ್ತಮೆಟ್ರಿ ಕೋರ್ಸ್‌ಗಳಿಗೆ ದಾಖಲಾತಿ ಆರಂಭ

Update: 2017-06-16 14:28 GMT

ಉಡುಪಿ, ಜೂ.16: ಉಡುಪಿ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಯ ಸಹಸಂಸ್ಥೆಯಾದ ‘ನೇತ್ರಜ್ಯೋತಿ ಕಾಲೇಜು ಆಪ್ತಮೆಟ್ರಿ’ ಸಂಸ್ಥೆಯಲ್ಲಿ ಬಿಎಸ್ಸಿ ಆಪ್ತಮೆಟ್ರಿ ಕೋರ್ಸ್‌ಗಳಿಗೆ 2017-18ರ ಸಾಲಿನ ದಾಖಲಾತಿ ಪ್ರಾರಂಭಗೊಂಡಿದೆ.
 
ಬೆಂಗಳೂರು ರಾಜೀವ್ ಗಾಂದಿ ಆರೋಗ್ಯ ವಿಜ್ಞಾನ ವಿ.ವಿ.ಯಿಂದ ಮಾನ್ಯತೆ ಪಡೆದ ಈ ಸಂಸ್ಥೆಯು ನಾಲ್ಕು ವರ್ಷದ ಬಿಎಸ್ಸಿ ಆಪ್ತಮೆಟ್ರಿ ಕೋರ್ಸ್ ಹೊಂದಿದೆ. ಅತ್ಯುತ್ತಮ ನುರಿತ ಶಿಕ್ಷರು, ಸುಸಜ್ಜಿತ ಪ್ರಯೋಗಾಲಯ, ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತರಬೇತಿ ಯಂತ್ರೋಪಕರಣಗಳನ್ನು ಈ ಶಿಕ್ಷಣ ಸಂಸ್ಥೆ ಹೊಂದಿದೆ. ಪ್ರಾಕ್ಟಿಕಲ್ ತರಬೇತಿಯನ್ನು ಪ್ರಸಾದ್ ನೇತ್ರಾಲಯ ದಲ್ಲಿ ನೀಡಲಾಗುತ್ತದೆ.

ಜೂ.30ರಂದು ದಾಖಲಾತಿ ಪಡೆಯಲು ಕೊನೆಯ ದಿನವಾಗಿರುತ್ತದೆ. ಈ ಕೋರ್ಸ್‌ಗೆ ದಾಖಲಾತಿ ಹೊಂದಲು ಕನಿಷ್ಟ ವಿದ್ಯಾರ್ಹತೆ ಪಿಯುಸಿ(ಪಿಸಿಬಿ) ಹೊಂದಿರಬೇಕು. ಈ ಕೋರ್ಸಿಗೆ ದಾಖಲಾತಿ ಹೊಂದಲು ಇಚ್ಛಿಸುವ ವಿದ್ಯಾರ್ಥಿಗಳು ಎ.ಅಬ್ದುಲ್ ಖಾದರ್(9738948296, 8277338622) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News