1ಲ.ರೂ.ಗಿಂತ ಕಡಿಮೆ ವಂಚನೆಯನ್ನು ಪೊಲೀಸರಿಗೆ ವರದಿ ಮಾಡಬೇಕಿಲ್ಲ: ಬ್ಯಾಂಕ್‌ಗಳಿಗೆ ಸಿವಿಸಿ ನಿರ್ದೇಶ

Update: 2017-06-16 14:28 GMT

ಹೊಸದಿಲ್ಲಿ,ಜೂ.16: ಒಂದು ಲಕ್ಷ ರೂ.ಗಿಂತ ಕಡಿಮೆ ಮೊತ್ತದ ವಂಚನೆ ಪ್ರಕರಣ ಗಳನ್ನು ಸ್ಥಳೀಯ ಪೊಲೀಸರಿಗೆ ವರದಿ ಮಾಡದಂತೆ ಕೇಂದ್ರ ಜಾಗ್ರತ ಆಯೋಗ (ಸಿವಿಸಿ)ವು ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸೂಚಿಸಿದೆ. ಬ್ಯಾಂಕ್ ಸಿಬ್ಬಂದಿಯೇ ವಂಚನೆಯಲ್ಲಿ ಭಾಗಿಯಾಗಿದ್ದರೆ ಮಾತ್ರ ಸ್ಥಳೀಯ ಪೊಲೀಸರಿಗೆ ವರದಿ ಮಾಡುವಂತೆ ಅದು ಸ್ಪಷ್ಟಪಡಿಸಿದೆ.

ಈ ಮುನ್ನ 10,000 ರೂ.ಗಿಂತ ಹೆಚ್ಚಿನ ಮತ್ತು ಒಂದು ಲ.ರೂ.ಗಿಂತ ಕಡಿಮೆ ಮೊತ್ತದ ವಂಚನೆಗಳನ್ನು ಪೊಲೀಸರಿಗೆ ವರದಿ ಮಾಡಬೇಕಾಗಿತ್ತು.
ಈ ವರ್ಗದ ಪ್ರಕರಣಗಳನ್ನು ವರದಿ ಮಾಡುವಲ್ಲಿ ಬ್ಯಾಂಕುಗಳು ಎದುರಿಸುತ್ತಿರುವ ವ್ಯಾವಹಾರಿಕ ಸಮಸ್ಯೆಗಳ ಹಿನ್ನಲೆಯಲ್ಲಿ ಆರ್‌ಬಿಐ ಜೊತೆ ಸಮಾಲೋಚನೆಯ ಬಳಿಕ ಸಿವಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

10,000 ರೂ.ಮೇಲಿನ ಮತ್ತು ಒಂದು ಲ.ರೂ.ಗಿಂತ ಕೆಳಗಿನ ವಂಚನೆ ಪ್ರಕರಣಗಳನ್ನು ಮುಂದಿನ ಅಗತ್ಯ ಕ್ರಮಕ್ಕಾಗಿ ಬ್ಯಾಂಕ ಅಧಿಕಾರಿಗಳೇ ಪರಿಶೀಲಿಸಬೇಕು ಎಂದು ಹಿರಿಯ ಸಿವಿಸಿ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News