ಹಲ್ಲೆ ಪ್ರಕರಣ: ಅಪರಾಧಿಗೆ ಶಿಕ್ಷೆ
Update: 2017-06-16 20:21 IST
ಕೊಣಾಜೆ, ಜೂ. 16: ಮುಡಿಪುವಿನ ಹಾಲು ಉತ್ಪಾದಕರ ಸಂಘಕ್ಕೆ ಹಾಲು ತಂದಿದ್ದ ವ್ಯಕ್ತಿಯೋರ್ವರ ಹಾಲಿನ ಗುಣಮಟ್ಟ ಉತ್ತಮವಾಗಿಲ್ಲ ಎಂದು ಹೇಳಿ ವಾಪಸ್ ಕೊಟ್ಟದಕ್ಕೆ ಹಲ್ಲೆ ನಡೆಸಿದ ಘಟನೆ 2013ರ ಅಕ್ಟೋಬರ್ ನಲ್ಲಿ ನಡೆದಿತ್ತು.
ಮುಡಿಪುವಿನ ಹಾಲು ಉತ್ಪಾದಕರ ಸಂಘಕ್ಕೆ ಬೋಳಿಯಾರ್ ನಿವಾಸಿ ವಾದಿರಾಜ್ ಎಂಬವರು ಹಾಲು ಮಾರಾಟ ಮಾಡಲು ತಂದಿದ್ದರು. ಈ ಸಂದರ್ಭ ಹಾಲು ಸಂಗ್ರಹಿಸುತ್ತಿದ್ದ ಮಿತ್ತಕೋಡಿಯ ಹೇಮಂತ ಎಂಬವರು ಹಾಲಿನ ಗುಣಮಟ್ಟ ಪರೀಕ್ಷಿಸಿದ್ದು ಗುಣಮಟ್ಟ ಕಡಿಮೆಯಿದ್ದುದರಿಂದ ಹಾಲನ್ನು ವಾಪಸ್ಸು ನೀಡಿದ್ದರು. ಇದರಿಂದ ಆಕ್ರೋಶಗೊಂಡ ವಾದಿರಾಜ ಹಾಲನ್ನು ಅಲ್ಲೇ ಚೆಲ್ಲಿ ಹೇಮಂತ್ ರಿಗೆ ಹಲ್ಲೆ ನಡೆಸಿದ್ದರು. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹೇಮಂತ್ ಕೊಣಾಜೆ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಅಪರಾಧಿಗೆ ಒಂದು ವರ್ಷ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.