×
Ad

ಲಂಡನ್ ಸಂಸತ್ತಿನತ್ತ ಓಡಿದ ವ್ಯಕ್ತಿಯ ಬಂಧನ

Update: 2017-06-16 20:32 IST

ಲಂಡನ್, ಜೂ. 16: ಮಧ್ಯ ಲಂಡನ್‌ನಲ್ಲಿ ಶುಕ್ರವಾರ ವೆಸ್ಟ್‌ಮಿನ್‌ಸ್ಟರ್ ಸಂಸತ್ತಿನ ದ್ವಾರವೊಂದರತ್ತ ಕಿರುಚುತ್ತಾ ಓಡಿದ ವ್ಯಕ್ತಿಯೋರ್ವನನ್ನು ಬ್ರಿಟಿಶ್ ಪೊಲೀಸರು ಬಂಧಿಸಿದ್ದಾರೆ.

ಸುಮಾರು ಮೂರು ತಿಂಗಳ ಹಿಂದೆ ಭಯೋತ್ಪಾದಕನೊಬ್ಬ ಪೊಲೀಸ್ ಅಧಿಕಾರಿಯನ್ನು ಕೊಂದ ದ್ವಾರದತ್ತ ಆ ವ್ಯಕ್ತಿ ಓಡಿದನು ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ರಾಯ್ಟರ್ಸ್’ಗೆ ತಿಳಿಸಿದರು.

ಆತ ಮುಷ್ಟಿಯನ್ನು ಬಿಗಿಹಿಡಿದು ಓಡುತ್ತಿದ್ದು, ಕೈಯಲ್ಲಿ ಚಾಕು ಹೊಂದಿರಬಹುದು ಎಂಬ ಸಂಶಯದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೂರು ತಿಂಗಳ ಅವಧಿಯಲ್ಲಿ ನಡೆದ ಮೂರು ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಲಂಡನ್ ನಗರದಲ್ಲಿ ಪೊಲೀಸರು ಕಟ್ಟೆಚ್ಚರದಲ್ಲಿದ್ದಾರೆ.

ಲಂಡನ್ ಸೇತುವೆಯಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ 8 ಮಂದಿದ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News