ಲೇಡಿಹಿಲ್‌ನಲ್ಲಿ ‘ಎಸ್.ಎಲ್.ಶೇಟ್ ಡೈಮಂಡ್ ಹೌಸ್’ ಉದ್ಘಾಟನೆ
ಮಂಗಳೂರು, ಜೂ.16: ನಗರದ ಲೇಡಿಹಿಲ್ ಬಳಿ ಎಂ. ರವೀಂದ್ರ ಶೇಟ್ ಮತ್ತು ಕುಟುಂಬದ ಸದಸ್ಯರ ಮಾಲಕತ್ವದ ‘ಎಸ್.ಎಲ್.ಶೆಟ್ ಡೈಮಂಡ್ ಹೌಸ್’ ನ ಸ್ವರ್ಣಾಭರಣ ಮತ್ತು ವಜ್ರಾಭರಣಗಳ ನೂತನ ಮಳಿಗೆ ‘ಎಸ್.ಎಲ್.ಶೇಟ್ ಡೈಮಂಡ್ ಹೌಸ್ ’ನ ನೂತನ ಮಳಿಗೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿನಿಧಿಗಳಾದ ಹರ್ಷೇಂದ್ರ ಕುಮಾರ್ ಮತ್ತು ಸುಪ್ರೀಯ ಹರ್ಷೇಂದ್ರ ಕುಮಾರ್ ಶುಕ್ರವಾರ ಉದ್ಘಾಟಿಸಿದರು.
ಶೇಟ್ ಕುಟುಂಬ ಹಾಗೂ ಸಮುದಾಯದ ಪ್ರತಿನಿಧಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಜೊತೆ ನಿಕಟವಾಗಿರುವವರು.1955ರಲ್ಲಿ ಕಮಲಾಕ್ಷ ಶೇಟ್, ಎಸ್.ಎಲ್. ಶೇಟ್ ಹಾಗೂ ಸಮುದಾಯದ ಪ್ರತಿನಿಧಿಗಳು ಸುಮದಾಯದ ವತಿಯಿಂದ ಬೆಳ್ಳಿ ಮಂಟಪವನ್ನು ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ಕೊಡಗೆಯಾಗಿ ನೀಡಿದ್ದಾರೆ. ಈ ಮಂಟಪವನ್ನು ಕ್ಷೇತ್ರದಲ್ಲಿ ನಡೆಸುವ ರಥೋತ್ಸವದ ಸಂದರ್ಭದಲ್ಲಿ ಬಳಸಲಾಗುತ್ತಿದೆ. ಈ ಸಂದರ್ಭದಲ್ಲಿ ಶೇಟ್ ಕುಟುಂಬ ಮತ್ತು ಸಮುದಾಯದ ಕೊಡುಗೆ ಯನ್ನು ನೆನಪಿಸಿಕೊಳ್ಳಲಾಗುತ್ತದೆ ಎಂದು ಹರ್ಷೇಂದ್ರ ಕುಮಾರ್ ತಿಳಿಸಿದ್ದಾರೆ.
ಮೊದಲ ಮಹಡಿ ಮತ್ತು ಬೆಳ್ಳಿ ವಿಭಾಗವನ್ನು ಶ್ರೀ ಕ್ಷೆತ್ರ ಹೊರನಾಡಿನ ಧರ್ಮಕರ್ತರಾದ ಡಾ. ಭೀಮೇಶ್ವರ ಜೋಶಿ ಮತ್ತು ರಾಜಲಕ್ಷ್ಮೀ ಜೋಶಿ ಉದ್ಘಾಟಿಸಿದರು. ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ, ಮೌಲ್ಯಾಧಾರಿತ ವ್ಯವಹಾರ, ಗ್ರಾಹಕರು ಸಂಸ್ಥೆಯ ಮೇಲಿಟ್ಟಿರುವ ವಿಶಾಸದಿಂದ ಸಂಸ್ಥೆ ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ.ಭೀಮೇಶ್ವರ ಜೋಶಿ ತಿಳಿಸಿದರು.
ವಜ್ರಾಭರಣ ವಿಭಾಗವನ್ನು ಜನತಾ ಕನ್ ಸ್ಟ್ರಕ್ಷನ್ ಸಂಸ್ಥೆಯ ಆಡಳಿತ ನಿರ್ದೇಶಕ ರಮೇಶ್ ಕುಮಾರ್ ಮತ್ತು ಅವರ ಪತ್ನಿ ಊರ್ಮಿಳಾ ರಮೇಶ್ ಕುಮಾರ್ ಉದ್ಘಾಟಿಸಿದರು. ಲೇಡಿಹಿಲ್ ಪರಿಸರದಲ್ಲಿ ಗ್ರಾಹಕರಿಗೆ ಹಾಗೂ ಆಭರಣ ಖರೀದಿಗೆ ಬರುವವರಿಗೆ ಪೂರಕವಾದ ವಿಶಾಲವಾದ ವಾಹನ ನಿಲುಗಡೆ ಪ್ರದೇಶವನ್ನು ಸಂಸ್ಥೆ ಹೊಂದಿರುವುದು, ಸಾಕಷ್ಟು ಸ್ಥಳಾವಕಾಶವನ್ನು ಹೊಂದಿರುವುದು ಸಂಸ್ಥೆಗೆ ವರದಾನವಾಗಿದೆ ಎಂದು ಉದ್ಯಮಿ ರಮೇಶ್ ಕುಮಾರ್ ತಿಳಿಸಿದರು.
1947ರಲ್ಲಿ ದಿ.ಎಸ್.ಎಲ್.ಶೇಟ್‌ರವರ ಮೂಲಕ ಆರಂಭಗೊಂಡ ಎಸ್.ಎಲ್.ಶೇಟ್ ಡೈಮಂಡ್ ಹೌಸ್ ಗ್ರಾಹಕರ ಪ್ರೀತಿ ವಿಸ್ವಾಸದೊಂದಿಗೆ ಎತ್ತರಕ್ಕೆ ಬೆಳೆದು ಇನ್ನಷ್ಟು ವಿಸ್ತರಣೆಗೆ ಕಾರಣವಾಗಿದೆ ಈ ಸಂದರ್ಭದಲ್ಲಿ ಸಂಸ್ಥೆಯನ್ನು ಬೆಂಬಲಿಸುತ್ತಾ ಬಂದ ಎಲ್ಲಾ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಂಸ್ಥೆಯ ಅಧ್ಯಕ್ಷ ಎಂ.ರವೀಂದ್ರ ಶೇಟ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಎಸ್.ಎಲ್.ಶೇಟ್ ಡೈಮಂಡ್ ಹೌಸ್‌ನ ಪಾಲುದಾರರಾದ ಎಂ.ಶರತ್ ಶೇಟ್, ದೀಪ್ತಿ ಶೇಟ್, ಎಂ.ಸುಮಂತ್ ಶೇಟ್, ಪೂಜಾ ಶೇಟ್, ಎಂ.ಪ್ರಸಾದ್ ಶೇಟ್, ಎಂ.ಪ್ರಸನ್ನ ಶೇಟ್ ಮತ್ತು ಗೌರವಾನ್ವಿತ ಅತಿಥಿಯಾಗಿ ಪದ್ಮಾ ರಘುನಾಥ ಶೇಟ್ ಹಾಗೂ ಆತ್ಮಾ ರಾಮ್, ಪಾಡಿಗಾರ್ ಶ್ರೀನಿವಾಸ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.