×
Ad

ಮಲೇಶ್ಯ: ಭಾರತ ಮೂಲದ ಬಾಲಕನ ಥಳಿಸಿ ಹತ್ಯೆ

Update: 2017-06-16 21:06 IST

ಕೌಲಾಲಂಪುರ, ಜೂ. 16: ಮಲೇಶ್ಯದಲ್ಲಿ ಭಾರತ ಮೂಲದ ಹದಿಹರಯದ ಬಾಲಕನೊಬ್ಬನಿಗೆ ಐವರು ವ್ಯಕ್ತಿಗಳು ಬೀಕರವಾಗಿ ಹಲ್ಲೆಗೈದ ಪರಿಣಾಮವಾಗಿ ಬಾಲಕ ಮೃತಪಟ್ಟಿದ್ದಾನೆ. ಆತ ಹೆಣ್ಣಿನಂತೆ ಕಾಣುತ್ತಿದ್ದ ಮತ್ತು ಹೆಣ್ಣಿನ ಲಕ್ಷಣಗಳನ್ನು ಹೊಂದಿದ್ದ ಎಂಬ ಕಾರಣಕ್ಕಾಗಿ ಈ ರೀತಿ ಮಾಡಲಾಗಿದೆ.

18 ವರ್ಷದ ಟಿ. ನವೀನ್ ಎಂಬವರಿಗೆ ಐವರು ಯುವಕರು ಹೆಲ್ಮೆಟ್‌ಗಳಿಂದ ದಾಳಿ ನಡೆಸಿದರು, ಬೆನ್ನಿಗೆ ಬೆಂಕಿ ಕೊಟ್ಟರು ಮತ್ತು ಆತನ ಮೇಲೆ ಅತ್ಯಾಚಾರ ನಡೆಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ದುಷ್ಕರ್ಮಿಗಳು ಆತನ ಹಳೆಯ ಶಾಲಾ ಸಹಪಾಠಿಗಳೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News