×
Ad

ಸಮಸ್ತ ಪರೀಕ್ಷೆ: ಆದಂ ಶಾಕಿರ್ ಆತೂರು ಪ್ರಥಮ

Update: 2017-06-16 21:23 IST

ಉಪ್ಪಿನಂಗಡಿ, ಜೂ. 16: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡು ಅಧೀನದಲ್ಲಿ ಮೇ ತಿಂಗಳಿನಲ್ಲಿ ನಡೆದ +2 ಪರೀಕ್ಷೆಯಲ್ಲಿ ಆತೂರು ತದ್‌ಬೀರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಆದಂ ಶಾಕಿರ್ ಸುಹೈಬ್ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು, ಅಲ್ಲದೆ ಅತೀ ಹೆಚ್ಚು ಅಂಕ ಪಡೆದು ಉಪ್ಪಿನಂಗಡಿ ರೇಂಜ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಆದಂ ಶಾಕಿರ್ ಸುಹೈಬ್ 2016-17ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿಯೂ ವಿಜ್ಞಾನ ವಿಭಾಗದಲ್ಲಿ 96 ಶೇಕಡಾ ಅಂಕದೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ಇವರು ಕೊಲ ಗ್ರಾಮ ಪಂ. ಸದಸ್ಯ ಕೆ.ಎ. ಸುಲೈಮಾನ್ ಮತ್ತು ಫಾತಿಮತ್ ಝೊಹರಾ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News