ಆತೂರು: ಹಫ್ವಾ ಫ್ಯಾಮಿಲಿ ವತಿಯಿಂದ ಇಫ್ತಾರ್ ಕೂಟ
Update: 2017-06-16 21:26 IST
ಉಪ್ಪಿನಂಗಡಿ, ಜೂ. 16: ಹಫ್ವಾ ಫ್ಯಾಮಿಲಿ ಅಸೋಸಿಯೇಶನ್ ಆತೂರು ಇದರ ಅಧೀನದಲ್ಲಿರುವ ಯುವಕರ ಸಂಘಟನೆ ಹಫ್ವಾ ಯೂತ್ ವಿಂಗ್ ವತಿಯಿಂದ ಇಫ್ತಾರ್ ಕೂಟ ಕಾರ್ಯಕ್ರಮವು ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಜರಗಿತು.
ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹನೀಫ್ ಫೈಝಿ ನೇತೃತ್ವದಲ್ಲಿ ಮರಣ ಹೊಂದಿದ ಹಫ್ವಾ ಕುಟುಂಬ ಸದಸ್ಯರುಗಳ ಹೆಸರಿನಲ್ಲಿ ಖತಮುಲ್ ಖುರ್‌ಆನ್ ಮತ್ತು ತಹ್ಲೀಲ್ ಸಮರ್ಪಣಾ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಹಫ್ವಾ ಸಮಿತಿ ಅಧ್ಯಕ್ಷ ಎನ್. ಇಬ್ರಾಹಿಂ ಜೇಡರಪೇಟೆ, ಉಪಾಧ್ಯಕ್ಷ ಇಬ್ರಾಹಿಂ ಹಾಜಿ, ಸುಲೈಮಾನ್ ಬೀಜತ್ತಲಿ, ಕಾರ್ಯದರ್ಶಿ ಇಬ್ರಾಹಿಂ, ಯೂತ್‌ವಿಂಗ್ ಸಲಹೆಗಾರ ಅಬ್ದುಲ್ ನಾಸಿರ್ ಹೊಸಮನೆ, ಅಧ್ಯಕ್ಷ ಖಲಂದರ್ ಪೆರ್ಜಿ, ಕಾರ್ಯದರ್ಶಿ ಉಮರ್ ಪಿಲಿಕುಡೆಲ್, ಸದಸ್ಯರಾದ ಅಬ್ದುಲ್ ಖಾದರ್ ಬಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಫ್ವಾ ಯೂತ್ ವಿಂಗ್ ವತಿಯಿಂದ ಬಡ ಕುಟುಂಬಗಳಿಗೆ ರಮಝಾನ್ ಕಿಟ್ ವಿತರಿಸಲಾಯಿು.