×
Ad

ದೇವಳದ ಕಾಣಿಕೆ ಡಬ್ಬಿ ಕಳವು

Update: 2017-06-16 21:40 IST

ಪಡುಬಿದ್ರಿ, ಜೂ.16: ಸಾಂತೂರು ಗ್ರಾಮದ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜೂ.15ರಂದು ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯ ಹಣವನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ದೇವಸ್ಥಾನದ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ದೇವಸ್ಥಾನದ ಆವರಣದಲ್ಲಿರುವ ಪಂಜುರ್ಲಿ ದೈವದ ಮತ್ತು ನಾಗದೇವರ ಗುಡಿಯ ಕಾಣಿಕೆ ಡಬ್ಬಿಯನ್ನು ಒಡೆದು 15,000ರಿಂದ 20,000ರೂ. ಹಣವನ್ನು ಕಳವು ಮಾಡಿದ್ದಾರೆ. ಅಲ್ಲದೆ, ಸೇವಾ ಕೌಂಟರಿನ ಬೀಗವನ್ನು ಮುರಿದು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News