ಪಡುಬಿದ್ರಿ: ಟ್ಯಾಂಕರ್- ಬೈಕ್ ಢಿಕ್ಕಿ: ಯುವಕ ಸಾವು
Update: 2017-06-16 21:46 IST
ಪಡುಬಿದ್ರಿ, ಜೂ.16: ಟ್ಯಾಂಕರ್ ಮತ್ತು ಬೈಕ್ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ನಾಗರಾಜ ಎಸ್ಟೇಟ್‌ನ ಎಸ್.ಎಸ್ ಬಾರ್ ಮುಂಭಾಗ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಮಂಗಳೂರು ನಿವಾಸಿ ದೀಪಕ್ ಉರ್ವ (27) ಅಪಘಾತದಲ್ಲಿ ಮೃತಪಟ್ಟಯುವಕ. ಉಡುಪಿ ಕರಾವಳಿ ಬೈಪಾಸ್‌ನಲ್ಲಿರುವ ಕೆನರಾ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿದ್ದ ಜೆಮ್ ಆಂಡ್ ಜ್ಯುವೆಲ್ ಕಾರ್ಯಕ್ರಮಕ್ಕೆ ಸಂಯೋಜನೆಗೆಂದು ತೆರಳಿದ್ದ ದೀಪಕ್, ಇವೆಂಟ್‌ಮೇನೆಜ್‌ಮೆಂಟ್ ಸದಸ್ಯೆಯೊಬ್ಬಳನ್ನು ಮಂಗಳೂರಿಗೆ ಬಿಡಲು ಹೋಗುತ್ತಿದ್ದ ವೇಳೆ ಪಡುಬಿದ್ರಿ ಎಸ್‌ಎಸ್ ಬಾರ್‌ಎದುರುಗಡೆ ಈ ಅಪಘಾತ ನಡೆದಿದೆ.
ಮಂಗಳೂರಿನಿಂದ ಓರಿಸ್ಸಾ ಗೆ ಪೆಟ್ರೋಲ್ ಸಾಗಿಸುತ್ತಿದ್ದ ತಮಿಳುನಾಡು ನೋಂದಾಯಿತ ಟ್ಯಾಂಕರ್ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಗಾಯಾಳು ದೀಪಕ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯೆವ ವೇಳೆ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.