ವಸತಿ ಮಂಜೂರಾತಿಯಲ್ಲಿ ಅಕ್ರಮ: ವಿಎ, ಪಿಡಿಒ ವಿರುದ್ಧ ಪ್ರಕರಣ
Update: 2017-06-16 21:46 IST
ಮಂಗಳೂರು, ಜೂ.16: ಸುಳ್ಯ ತಾಲೂಕು ಎಡಮಂಗಲ ಗ್ರಾಮದ 2015-16ನೆ ಸಾಲಿನಲ್ಲಿ ಬಸವ ವಸತಿ ಯೋಜನೆಯಲ್ಲಿ ಎಡಮಂಗಲ ಗ್ರಾಮದ ಶಿವಮ್ಮ ಅವರಿಗೆ ಮನೆ ಮಂಜೂರು ಮಾಡಿದ್ದು, ಶಿವಮ್ಮ ವಾರ್ಷಿಕ ಆದಾಯ 1,93,296 ರೂ . ಇದ್ದರೂ ಕೂಡಾ ಎಡಮಂಗಲ ಗ್ರಾಮ ಲೆಕ್ಕಾಧಿಕಾರಿ ಬಸವರಾಜ್ ರೂ 31,000 ಆದಾಯ ಇರುವುದಾಗಿ ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿದ್ದಾರೆ.
ಇದೇ ಪ್ರಕರಣದಲ್ಲಿ ಈ ಹಿಂದೆ ಎಡಮಂಗಲ ಪಿಡಿಒ ಚೆನ್ನಪ್ಪಗೌಡ ಬಸವ ವಸತಿ ಯೋಜನೆಯಲ್ಲಿ ಮನೆ ಮಂಜೂರುಗೊಳಿಸಿ ಭ್ರಷ್ಟಾಚಾರ ಎಸಗಿರುವ ಬಗ್ಗೆ ರಾಜೇಶ್ ರೈ ಎಂಬವರು ಎಸಿಬಿಗೆ ದೂರು ಸಲ್ಲಿಸಿದ್ದಾರೆ.
ಈ ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಡಿವೈಎಸ್‌ಪಿ ಸುಧೀರ್ ಎಂ. ಹೆಗ್ಡೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.