ಎಸಿಪಿ ಶೃತಿಗೆ ಪದೋನ್ನತಿ
Update: 2017-06-16 21:49 IST
ಮಂಗಳೂರು, ಜೂ. 16: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ದಕ್ಷಿಣ ಉಪ ವಿಭಾಗದ ಎಸಿಪಿಯಾಗಿದ್ದ ಎನ್.ಎಸ್. ಶೃತಿ ಅವರು ಪಶ್ಚಿಮ ವಲಯ (ಮಂಗಳೂರು) ಭ್ರಷ್ಟಾಚಾರ ನಿಗ್ರಹದಳ (ಎಸಿಬಿ)ದ ಎಸ್ಪಿಯಾಗಿ ಪದೋನ್ನತಿ ಪಡೆದಿದ್ದಾರೆ.
ಶುಕ್ರವಾರ ಸರಕಾರ ಹೊರಡಿಸಿದ ಪ್ರಕಟನೆಯಲ್ಲಿ ಈ ಅಧಿಸೂಚನೆ ಪ್ರಕಟವಾಗಿದೆ. ಶೃತಿ ಅವರು 2016ರ ಜುಲೈ 11ರಂದು ದಕ್ಷಿಣ ಉಪವಿಭಾಗದ ಎಸಿಪಿಯಾಗಿ ಅಧಿಕಾರಿ ಸ್ವೀಕರಿಸಿದ ಬಳಿಕ ತನ್ನ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಮೂಲಾಗ್ರ ಸೇವೆ ಸಲ್ಲಿಸಿದ್ದರು.
ಮೂಲತಃ ಮಂಗಳೂರಿನವರಾದ ಶೃತಿ ಅವರ ಪೋಷಕರು ಪ್ರಸ್ತುತ ಮಡಿಕೇರಿಯಲ್ಲಿ ವಾಸ್ತವ್ಯವಿದ್ದಾರೆ. ನಗರದ ಕೆನರಾ ಕಾಲೇಜಿನಲ್ಲಿ ಶೃತಿ ವಿದ್ಯಾಭ್ಯಾಸ ಮಾಡಿದ್ದರು.