ಪಬ್ಲಿಕ್ ಪರೀಕ್ಷೆ: ಕರಿಯಂಗಳ ಮದ್ರಸಾದ 6 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್
Update: 2017-06-17 16:25 IST
ಬಂಟ್ವಾಳ, ಜೂನ್ 17 : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2017ನೇ ಸಾಲಿನ 7 ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಕರಿಯಂಗಳ - ಪಲ್ಲಿಪಾಡಿ ನೂರುಲ್ ಇಸ್ಲಾಂ ಮದ್ರಸಾದ 6 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.ಹಾಗೂ ಓರ್ವ ವಿದ್ಯಾರ್ಥಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ.
ನಬೀಲ್ ಅಹ್ಮದ್, ತೌಸೀಫ್, ರುಶೈದಾ ಬಾನು, ಸಾಜಿದಾ ಬಾನು, ಮುಫೀದಾ ಬಾನು ಹಾಗೂ ರಾಝಿಕ್ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು. ಇನ್ನು ತಸ್ರೀಫ್ ಫಸ್ಟ್ ಕ್ಲಾಸ್ ನಲ್ಲಿ ಉತ್ತೀರ್ಣನಾಗಿದ್ದಾನೆ. ಈ ವರ್ಷ ಸಹ ಈ ಮದ್ರಸಾ ಶೇಕಡಾ 100 ಫಲಿತಾಂಶವನ್ನು ಪಡೆದಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಬೆನ್ನೆಲುಬಾಗಿ ನಿಂತ ಖತೀಬ್ ಇಬ್ರಾಹಿಂ ಫಾಝಿಲ್ ಹನೀಫಿ ಬುಡೋಳಿಯವರನ್ನು ಕರಿಯಂಗಳ ಅಲ್ ಬದ್ರುಲ್ ಹುದಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.