ಜೂ.18: ಸ್ಪಂದನ ಚಾನೆಲ್‌ನಲ್ಲಿ ನೇರ ಪ್ರಸಾರ
Update: 2017-06-17 16:52 IST
ಮಂಗಳೂರು,ಜೂ.17: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ರಮಝಾನ್ ಪ್ರಯುಕ್ತ ‘ಬ್ಯಾರಿ ಸಂಸ್ಕೃತಿಯಲ್ಲಿ ರಮಝಾನ ಉಪವಾಸ ಮತ್ತು ಝಕಾತ್’ ಎಂಬ ವಿಷಯದ ಬಗ್ಗೆ ಚರ್ಚೆಯು ಜೂ.18ರಂದು ಪೂರ್ವಾಹ್ನ 11 ರಿಂದ 12ರವರೆಗೆ ಸ್ಪಂದನ ಚಾನೆಲ್‌ನಲ್ಲಿ ನೇರಪ್ರಸಾರ ನಡೆಯಲಿದೆ.
ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಪಾಲ್ಗೊಳ್ಳಲಿದ್ದು, ಅಕಾಡಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಮತ್ತು ರಿಜಿಸ್ಟ್ರಾರ್ ಉಮರಬ್ಬ ಉಪಸ್ಥಿತರಿರುವರು. ಸಾರ್ವಜನಿಕರು ಈ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು ಎಂದು ಪ್ರಕಟನೆ ತಿಳಿಸಿದೆ.