ಎಸ್‌ಡಿಎಯು ವತಿಯಿಂದ ಇಫ್ತಾರ್ ಕೂಟ
Update: 2017-06-17 16:56 IST
ಮಂಗಳೂರು, ಜೂ.17: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್‌ನ ಅಂಗ ಸಂಸ್ಥೆಯಾದ ಸೋಶಿಯಲ್ ಡೆಮಾಕ್ರಟಿಕ್ ಆಟೊ ಯೂನಿಯನ್ (ಎಸ್‌ಡಿಎಯು)ನ ಆಶ್ರಯದಲ್ಲಿ ನಗರದ ಎನ್.ಜಿ.ಒ. ಸಭಾಂಗಣದಲ್ಲಿ ಆಟೋ ಚಾಲಕರ ಇಫ್ತಾರ್ ಕೂಟ ನಡೆಯಿತು.
ಎಸ್‌ಡಿಎಯು ಮಂಗಳೂರು ನಗರ ಸಮಿತಿಯ ಅಧ್ಯಕ್ಷ ಕಮಲ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್‌ನ ರಾಜ್ಯಾಧ್ಯಕ್ಷ ಜಲೀಲ್ ಕೃಷ್ಣಾಪುರ, ಎಸ್.ಡಿ.ಎ.ಯು. ರಾಜ್ಯ ಕಾರ್ಯದರ್ಶಿ ಮಜೀದ್ ಜೋಕಟ್ಟೆ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ರಾಜ್ಯ ಕಾರ್ಯದರ್ಶಿ ಎ.ಕೆ ಫೈಝಿ, ಎಸ್.ಡಿ.ಪಿ.ಐ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಥಾವುಲ್ಲ ಜೋಕಟ್ಟೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಎಸ್.ಡಿ.ಟಿ.ಯು. ಜಿಲ್ಲಾ ಸಂಚಾಲಕ ಯೂಸುಫ್ ಆಲಡ್ಕ ಉಪಸ್ಥಿತರಿದ್ದರು. ಮುನೀಬ್ ಬೆಂಗ್ರೆ ಸ್ವಾಗತಿಸಿದರು. ಅಮೀನ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.