×
Ad

ತೊಕ್ಕೊಟ್ಟು: ರಸ್ತೆ ಬದಿಯ ಗೂಡಂಗಡಿಗಳ ತೆರವು

Update: 2017-06-17 16:56 IST

ಉಳ್ಳಾಲ, ಜೂ. 17: ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪೌರಾಯುಕ್ತರ ಆದೇಶದ ಮೇರೆಗೆ ಉಳ್ಳಾಲ ನಗರ ಸಭಾ ವತಿಯಿಂದ ತೊಕ್ಕೊಟ್ಟು ರಸ್ತೆ ಬದಿಯಲ್ಲಿದ್ದ ಗೂಡಂಗಡಿಗಳನ್ನು ಶನಿವಾರ ತೆರವುಗೊಳಿಸಲಾಯಿತು.

ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಕಾರ್ಯಾಚರಣೆ ಮಾಡಿದ್ದೇವೆ, ಸ್ವಚ್ಚ ತೊಕ್ಕೊಟ್ಟಿನ ಪರಿಕಲ್ಪನೆಗೆ ಉಳ್ಳಾಲ ನಗರ ಸಭೆಯೊಂದಿಗೆ ಎಲ್ಲಾ ನಾಗರಿಕರು ಕೈ ಜೋಡಿಸಿ ಎಂದು ಉಳ್ಳಾಲ ನಗರ ಸಭೆ ಆಯುಕ್ತೆ ವಾಣಿ ಆಳ್ವ ಈ ಸಂದರ್ಭದಲ್ಲಿ ತಿಳಿಸಿದರು.

ಸಿಯಾಳದ ಗೆರಟೆಯಲ್ಲಿ ಮಳೆಯ ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ಆರೋಗ್ಯ ಇಲಾಖೆ ಈ ಹಿಂದೆ ಎಚ್ಚರಿಸಿದರೂ ಪ್ರಯೋಜನ ವಾಗಿಲ್ಲ ಈ ನಿಟ್ಟಿನಲ್ಲಿ ತೊಕ್ಕೊಟ್ಟು ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ತೆರವುಗೊಳಿಸಿದ್ದೇವೆ ಎಂದು ಉಳ್ಳಾಲ ನಗರ ಸಭೆ ಆರೋಗ್ಯ ನಿರೀಕ್ಷಕ ರಾಜೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News