×
Ad

ಆಧಾರ್ ನೋಂದಣಿ ಮುಂದುವರಿಸಲು ಮನವಿ

Update: 2017-06-17 16:59 IST

ಮಂಗಳೂರು, ಜೂ.17: ನಗರದ ಜೆಪ್ಪುಕೆಥೊಲಿಕ್ ಸಭಾಂಗಣದಲ್ಲಿ ನಡೆದ ಆಧಾರ್ ನೋಂದಣಿ ಅಭಿಯಾನವನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕೇಂದ್ರ ಸರಕಾರದ ನಿಯಮದ ಪ್ರಕಾರ ಬ್ಯಾಂಕಿನಿಂದ ಹಣ ಪಡೆಯಲು ಹಾಗೂ ಠೇವಣಿ ಇಡಲು ಆಧಾರ್ ಕಡ್ಡಾಯ ಎಂಬ ನಿಯಮಕ್ಕೆ ಕನಿಷ್ಠ 6 ತಿಂಗಳಾದರೂ ಸಮಯವನ್ನು ನೀಡಬೇಕು ಎಂದು ಹೇಳಿದರು.

ಶೇ.80ರಷ್ಟು ಜನರ ಆಧಾರ್ ನೋಂದಣಿಯಾಗಿದೆ ಎಂದು ಜಿಲ್ಲಾಡಳಿತದ ಹೇಳಿಕೆಯಾಗಿತ್ತು. ಜಿಲ್ಲಾಡಳಿತ ಸಹಯೋಗದಿಂದ 22 ಶಿಬಿರಗಳನ್ನು ನಡೆಸಿ 10,000 ಜನರು ಆಧಾರ್ ನೋಂದಣಿ ಮಾಡಿಸಿದ್ದಾರೆ ಎಂದರು.
 
ಮಾಜಿ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ಅನಿಲ್ ತೋರಸ್ ಜೆಪ್ಪು, ಜೆ. ಆನಂದ್ ಸೋನ್ಸ್ ಜೈಲ್‌ರೋಡ್, ನಾಗೇಂದ್ರ ಕುಮಾರ್, ಮುದಸಿರ್, ಶೌವಾದ್ ಗೂನಡ್ಕ, ಕೈಸರ್ ಕುದ್ರೋಳಿ, ಮಹೇಶ್ ಕೋಡಿಕಲ್, ವಿಜಯ ಆಲ್ಫ್ರೆಡ್, ಶಶಿಕಾಂತ್ ಶೆಟ್ಟಿ, ನವೀನ್ ಸ್ಟೀವನ್, ಅನಿಲ್ ಪೆರ್ಮದೆ ಮುಂತಾದವರು ಉಪಸ್ಥಿತರಿದ್ದರು. ಕೆಥೋಲಿಕ್ ಸಭಾದ ಉಪಾಧ್ಯಕ್ಷ ಸತೀಶ್ ಪೊನ್ಸೆಕಾ ಕಾರ್ಯಕ್ರಮ ನಿರೂಪಿಸಿದರು. ಲೂಸಿ ಡಿಸಿಲ್ವ ಸ್ವಾಗತಿಸಿ,ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News