×
Ad

ಪೊಲೀಸ್ ದೌರ್ಜನ್ಯಕ್ಕೆ ವುಮೆನ್ ಇಂಡಿಯಾ ಮೂವ್‌ಮೆಂಟ್ ಖಂಡನೆ

Update: 2017-06-17 17:01 IST

ಮಂಗಳೂರು, ಜೂ.17: ಕಲ್ಲಡ್ಕದಲ್ಲಿ ನಡೆಯುತ್ತಿರುವ ಕೋಮುಗಲಭೆಗೆ ಸಂಬಂಧಿಸಿದಂತೆ ರಮಝಾನ್ ತಿಂಗಳನ್ನೂ ಲೆಕ್ಕಿಸದೆ ರಾತ್ರೋರಾತ್ರಿ ಪೊಲೀಸರು ಅಮಾಯಕ ಮುಸ್ಲಿಮರ ಮನೆಗೆ ನುಗ್ಗಿ ಮನೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿ, ಮಹಿಳೆಯರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ಏಕವಚನದಲ್ಲಿ ನಿಂದಿಸಿ ಅಗೌರವ ತೋರಿರುವ ಅಮಾನವೀಯ ಕೃತ್ಯವನ್ನು ವುಮೆನ್ ಇಂಡಿಯಾ ಮೂವ್‌ಮೆಂಟ್ ದ.ಕ. ಜಿಲ್ಲಾ ಸಮಿತಿ (ಡಬ್ಲುಐಎಂ) ಖಂಡಿಸಿದೆ.

ಮಹಿಳೆಯರು ಮನೆಯೊಳಗಿರುವ ಸಂದರ್ಭ ವಿಚಾರಣೆಯ ನೆಪದಲ್ಲಿ ಪೊಲೀಸರು ಮನೆಗೆ ಪ್ರವೇಶಿಸುವಾಗ ಮಹಿಳಾ ಪೊಲೀಸರನ್ನು ಬಳಸಬೇಕು ಎಂಬುದು ನಿಮಯವಾಗಿದೆ. ಆದರೆ ಇವೆಲ್ಲವನ್ನು ಗಾಳಿಗೆ ತೂರಿ ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳು, ತಾಯಂದಿರು ಮನೆಯೊಳಗಿರುವಾಗ ಬಾಗಿಲು ಹೊಡೆದು ಅಕ್ರಮವಾಗಿ ಪ್ರವೇಶಿಸಿ ಹಾಗೂ ಅದನ್ನು ಪ್ರಶ್ನಿಸಿದ ಮಹಿಳೆಯರ ಮೇಲೆ ಹಲ್ಲೆಗೆ ಯತ್ನಿಸಿ, ಬೆದರಿಕೆ ಒಡ್ಡಿರುವ ಬಂಟ್ವಾಳ ನಗರ ಪೊಲೀಸ್ ಉಪ ನಿರೀಕ್ಷಕ ರಕ್ಷಿತ್ ಗೌಡ ಮತ್ತು ಇತರ ಪೊಲೀಸರ ಕೆಲಸವವು ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News