ಮಂಜೇಶ್ವರ; ಗೃಹಿಣಿ ನಾಪತ್ತೆ
Update: 2017-06-17 18:05 IST
ಮಂಜೇಶ್ವರ,ಜು.17: ಮೀಯಪದವು ಕಾರ್ಳೆ ನಿವಾಸಿ ಅಪೋಲಿನ್ ಡಿಸೋಜ ಎಂಬವರ ಪತ್ನಿ ಶೋಭಾ ಡಿಸೋಜಾ (35) ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಇವರು ನಾಲ್ಕು ಮಕ್ಕಳ ತಾಯಿಯಾಗಿದ್ದಾರೆ.
ಶುಕ್ರವಾರ ಮನೆಯಲ್ಲಿ ಶೋಭಾ ಡಿಸೋಜಾ ಹಾಗೂ ಅವರ ಅತ್ತೆ ಮಾತ್ರವೇ ಇದ್ದರು. ಸಂಜೆ ಅಪೋಲಿನ್ ಡಿಸೋಜಾ ಮನೆಗೆ ತಲುಪಿದಾಗ ಪತ್ನಿ ಶೋಭಾ ಡಿಸೋಜಾ ನಾಪತ್ತೆ ಯಾಗಿರುವುದು ಗಮನಕ್ಕೆ ಬಂತು. ಈ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.