ಅಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Update: 2017-06-17 13:05 GMT

ಮಂಗಳೂರು, ಜೂ.17: ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ವಿವಿಧ ವಿಭಾಗ ಹಾಗೂ ಘಟಕ ಕಾಲೇಜುಗಳಲ್ಲಿ ವಿವಿಧ ಅಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಸಮಾಜಸೇವೆ, ಸಂಖ್ಯಾಶಾಸ್ತ ವಿಷಯಗಳಲ್ಲಿ ಪ್ರೊಫೆಸರ್ ಹುದ್ದೆ (ಬ್ಯಾಕ್‌ಲಾಗ್), ಕಂಪ್ಯೂಟರ್ ಸೈಯನ್ಸ್ ಹಾಗೂ ಸಂಖ್ಯಾಶಾಸ್ತ್ರ ವಿಷಯಗಳಲ್ಲಿ ಸಹಾಯಕ ಪ್ರೊಫೆಸರ್ ಹುದ್ದೆ (ಬ್ಯಾಕ್‌ಲಾಗ್), ಗಣಿತ ಶಾಸ್ತ್ರ, ಗ್ರಂಥಾಲಯ ಮಾಹಿತಿ ವಿಜ್ಞಾನ ವಿಷಯಗಳಲ್ಲಿ ಪ್ರೊಫೆಸರ್ ಹುದ್ದೆ, ಬಯೋಕೆಮಿಸ್ಟ್ರಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ವ್ಯವಹಾರ ಆಡಳಿತದಲ್ಲಿ ಸಹ ಪ್ರೊಫೆಸರ್ ಹುದ್ದೆ, ಬಯೋಟೆಕ್ನಾಲಜಿ ಮತ್ತು ಭೌತಶಾಸ್ತ್ರದಲ್ಲಿ ಸಹಾಯಕ ಅಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿಶ್ವ ವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿ ವಿವಿಧ ವಿಷಯಗಳಲ್ಲಿ 9 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಹಾಗೂ ಮಡಿಕೇರಿ ಕಾರ್ಯಪ್ಪ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಹಾಗೂ ಹೆಚ್ಚಿನ ಮಾತಿಗಳನ್ನು ಮಂಗಳೂರು ವೆಬ್‌ಸೈಟ್ ತಿತಿತಿ.ಚಿಟಿಚಿಟಡಿಟಿಡಿಣಥಿ.ಚಿಛಿ.ಟಿ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News