ಕದನ ವಿರಾಮ ಉಲ್ಲಂಘನೆ ತಡೆಯುವಲ್ಲಿ ಕೇಂದ್ರದ ಆಲಸ್ಯತನ: ಹುತಾತ್ಮ ಯೋಧನ ಕುಟುಂಬಸ್ಥರಿಂದ ಟೀಕೆ

Update: 2017-06-17 13:16 GMT

ಹೋಶಿಯಾರ್ ಪುರ, ಜೂ.17: ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಯನ್ನು ತಡೆಯುವಲ್ಲಿ ಕೇಂದ್ರ ಸರಕಾರ ನಿಷ್ಕ್ರಿಯಗೊಂಡಿದೆ ಎಂದು ಹುತಾತ್ಮ ಯೋಧ ನಾಯ್ಕ್ ಬಖ್ತವರ್ ಸಿಂಗ್ ಅವರ ಕುಟುಂಬಸ್ಥರು ಟೀಕಿಸಿದ್ದಾರೆ.

ಗುರುವಾರ ಪಾಕಿಸ್ತಾನ ಸೇನೆಯಿಂದ ನಡೆದ ಕದನ ವಿರಾಮ ಉಲ್ಲಂಘನೆಯಲ್ಲಿ 34 ವರ್ಷದ ಬಖ್ತವಾರ್ ಸಿಂಗ್ ಮೃತಪಟ್ಟಿದ್ದರು. “ದೇಶಕ್ಕಾಗಿ ಪ್ರಾಣವನ್ನರ್ಪಿಸಿದ ಮಗನ ಬಗ್ಗೆ ನಮಗೆ ಹೆಮ್ಮೆಯಿದೆ. ಆತ ಇಬ್ಬರು ಸಣ್ಣ  ಮಕ್ಕಳನ್ನು ಅಗಲಿದ್ದಾನೆ ಎನ್ನುವ ಬೇಸರವೂ ಇದೆ. ಇದು ಸರಕಾರ ಆಲಸ್ಯತನದಿಂದ ನಡೆದಿದೆ” ಎಂದು ಬಖ್ತವಾರ್ ರ ತಂದೆ ಹೇಳಿದ್ದಾರೆ.

ಹುತಾತ್ಮ ಯೋಧನ ಪತ್ನಿಗೆ ನೆರವಾಗುವ ದುಡಿಮೆಯನ್ನೂ ಕಲ್ಪಿಸುವಂತೆ ಅವರು ಈ ಸಂದರ್ಭ ಸರಕಾರವನ್ನು ಆಗ್ರಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News