×
Ad

ಅಂತರ್ಜಾಲದಲ್ಲಿ ಪ್ರಾಣಿಗಳ ಅಂಗಾಂಗ ಮಾರಾಟ: ದೇವಳದ ಅರ್ಚಕನ ಬಂಧನ

Update: 2017-06-17 18:46 IST

ಭೋಪಾಲ್, ಜೂ.17: ಕಾಡುಪ್ರಾಣಿಗಳ ದೇಹದ ಭಾಗಗಳನ್ನು ಅಂತರ್ಜಾಲದಲ್ಲಿ ಮಾರಾಟ ಮಾಡುತ್ತಿದ್ದ ಮತ್ತು ಇದರಿಂದ ಔಷಧ ತಯಾರಿಸುತ್ತಿದ್ದ ಆರೋಪದಲ್ಲಿ ದೇವಳದ ಅರ್ಚಕನೋರ್ವನನ್ನು ಬಂಧಿಸಲಾಗಿದೆ.

    ದಿಲ್ಲಿ ಮೂಲದ ವನ್ಯಜೀವಿ ಅಪರಾಧ ನಿಯಂತ್ರಣ ದಳ(ಡಬ್ಲೂಸಿಸಿಬಿ)ದ ಅಧಿಕಾರಿಗಳ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತನಾದ ಅರ್ಚಕನನ್ನು ಲೋಕೇಶ್ ಜಾಗೀರ್‌ದಾರ್ ಎಂದು ಗುರುತಿಸಲಾಗಿದೆ. ಕಾಡುಪ್ರಾಣಿಗಳ ಅಂಗಾಂಗದಿಂದ ಸಾಂಪ್ರದಾಯಿಕ ಔಷಧ ಮತ್ತು ತಾಯಿತವನ್ನು ತಯಾರಿಸಿ , ಇದನ್ನು ಉಪಯೋಗಿಸಿದರೆ ದೇಹದಲ್ಲಿ ಚೈತನ್ಯ ತುಂಬುತ್ತದೆ ಎಂದು ನಂಬಿಸಿ ಅವನ್ನು ಅಂತರ್ಜಾಲದ ಮೂಲಕ ವಿಶ್ವದಾದ್ಯಂತ ಮಾರಾಟ ಮಾಡುತ್ತಿದ್ದ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ, ಮಲೇಶ್ಯ, ಜರ್ಮನಿ, ಆಸ್ಟ್ರೇಲಿಯಾ ಮತ್ತಿತರ ದೇಶಗಳ ಜನರಿಗೆ ತಾನು ಆನ್‌ಲೈನ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದಾಗಿ ಜಾಗೀರ್‌ದಾರ್ ತಿಳಿಸಿದ್ದಾನೆ. ಈತನ ಬಳಿಯಿದ್ದ ಭಾರೀ ಪ್ರಮಾಣದ ಕಾಡುಪ್ರಾಣಿಗಳ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಪ ವಿಭಾಗೀಯ ಅರಣ್ಯಾಧಿಕಾರಿ ಎ.ಕೆ.ಸೋಳಂಕಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News