ಹಿಂಸೆಗೆ ತಿರುಗಿದ ಗೂರ್ಖಾಲ್ಯಾಂಡ್ ಪ್ರತಿಭಟನೆ: ಡಾರ್ಜಿಲಿಂಗ್‌ನಲ್ಲಿ ಮೊದಲ ಸಾವು

Update: 2017-06-17 14:30 GMT

ಡಾರ್ಜಿಲಿಂಗ್, ಜೂ. 17: ಹಿಂಸಾಚಾರದಿಂದ ಕಂಪಿಸುತ್ತಿರುವ ಡಾರ್ಜಿಲಿಂಗ್ ನಲ್ಲಿ ಸೇನೆ ಹಾಗೂ ಅರೆಸೈನಿಕ ಪಡೆಗಳು ಗಸ್ತು ಆರಂಭಿಸಿದ್ದರೂ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಗೋರ್ಖಾ ಜನಮುಕ್ತಿ ಮೋರ್ಚಾದ ಬೆಂಬಲಿಗನೊಬ್ಬ ಹತ್ಯೆಗೀಡಾಗಿದ್ದಾನೆ.

ಜೂನ್ 8ರಿಂದ ಆರಂಭವಾದ ಘರ್ಷಣೆಯಲ್ಲಿ ಸಂಭವಿಸಿದ ಮೊದಲ ಹತ್ಯೆ ಇದಾಗಿದೆ. ಇಲ್ಲಿನ ಸಂತ ಜೋಸೆಫ್ ಕಾಲೇಜಿನ ಎದುರು ಗುಂಡಿನ ದಾಳಿಗೆ ತುತ್ತಾಗಿ ಮೃತಪಟ್ಟ ವ್ಯಕ್ತಿಯನ್ನು ಇದುವರೆಗೆ ಗುರುತಿಸಲಾಗಿಲ್ಲ. ಆತನ ಮೃತದೇಹವನ್ನು ಸೇನಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಪ್ರತಿಭಟನಕಾರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ ಎಂಬುದನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಹಾಗೂ ಸುವ್ಯವಸ್ಥೆ) ಅನುಜ್ ಶರ್ಮಾ ನಿರಾಕರಿಸಿದ್ದಾರೆ. ಘಟನೆಯ ಸಂದರ್ಭ ಗೋರ್ಖಾ ಜನಮುಕ್ತಿ ಮೋರ್ಚಾ ದ ಬೆಂಬಲಿಗರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ಗೋರ್ಖಾ ಜನಮುಕ್ತಿ ಮೋರ್ಚಾದ ಬೆಂಬಲಿಗರು ಸಿಂಗಮಾರಿ ಜಿಜೆಎಂ ಕಚೇರಿಯ ಸಮೀಪ ಕೆಲವು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

  ಗುಂಡಿನ ದಾಳಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಪೊಲೀಸರು ರಬ್ಬರ್ ಗುಂಡು ಅಥವಾ ಜಲಪಿರಂಗಿ ಬಳಸಿಲ್ಲ. ಅವರು .303 ಗಂಡುಗಳಿಂದ ದಾಳಿ ನಡೆಸಿದ್ದಾರೆ. ನಾವು ಭಾರತದ ಶತ್ರುಗಳೇ ? ಎಂದು ಗೋರ್ಖಾ ಜನಮುಕ್ತಿ ಮೋರ್ಚಾದ ಉಪ ಕಾರ್ಯದರ್ಶಿ ಬಿನಾಯ್ ತಮಂಗ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News