ಕಾರ್ಯಕ್ರಮದಲ್ಲಿ ಕೆಲ ಬದಲಾವಣೆ

Update: 2017-06-17 15:18 GMT

ಉಡುಪಿ, ಜೂ.17: ಭಾರತದ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಅವರು ಉಡುಪಿ ಜಿಲ್ಲೆಗೆ ನಾಳೆ ಮೊದಲ ಬಾರಿ ಭೇಟಿ ನೀಡಲಿದ್ದು, ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಈ ಮೊದಲು ನಿರ್ಧರಿಸಿದಂತೆ ಅವರು ಕೊಲ್ಲೂರು ದೇವಸ್ಥಾನ ಭೇಟಿ ಬಳಿಕ ಅಲ್ಲಿಗೆ ಸಮೀಪದ ಅರೆಶಿರೂರು ಹೆಲಿಪ್ಯಾಡ್‌ನಿಂದ ಮಂಗಳೂರಿಗೆ ಹಿಂದಿರುಗದೇ ಮತ್ತೊಮ್ಮೆ ಉಡುಪಿಗೆ ಆಗಮಿಸಿ, ಇಲ್ಲಿನ ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಮಂಗಳೂರಿಗೆ ತೆರಳಲಿದ್ದಾರೆ.

ರಾಷ್ಟ್ರಪತಿ ಹಾಗೂ ಅವರ ಬಳಗದ ಊಟ-ತಿಂಡಿ ವ್ಯವಸ್ಥೆಯ ಹೊಣೆಗಾರಿಕೆಯನ್ನು ನಗರದ ಪ್ರತಿಷ್ಠಿತ ಹೊಟೇಲ್ ಒಂದಕ್ಕೆ ವಹಿಸಲಾಗಿದ್ದು, ಅದರ ಹೊಸದಿಲ್ಲಿಯ ಬಾಣಸಿಗರು ಇಲ್ಲಿಗೆ ಬಂದು ಬೇಕಾದ ತಿಂಡಿ ತಿನಿಸುಗಳನ್ನು ತಯಾರಿಸಲಿದ್ದಾರೆ. ಎಲ್ಲವನ್ನೂ ಭದ್ರತಾ ಪಡೆಗಳ ಮೇಲುಸ್ತುವಾರಿಯಲ್ಲೇ ಅವರಿಗೆ ನೀಡಲಾಗುತ್ತದೆ.

ರಾಷ್ಟ್ರಪತಿಗಳ ಭೇಟಿಯ ಸಂದರ್ಭದಲ್ಲಿ ಉಡುಪಿ, ರಾ.ಹೆದ್ದಾರಿ ಹಾಗೂ ಕೊಲ್ಲೂರುಗಳಲ್ಲಿ ವಿಶೇಷ ಭದ್ರತೆಯನ್ನು ಕೈಗೊಳ್ಳಲಾಗಿದೆ. ಉಡುಪಿಯಲ್ಲಿ 1200 ಭದ್ರತಾ ಸಿಬ್ಬಂದಿಗಳು ಹಾಗೂ ಕೊಲ್ಲೂರಿನಲ್ಲಿ 600 ಮಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಭೇಟಿಯ ವೇಳೆ ರಾಷ್ಟ್ರಪತಿಗಳು ಸಂಚರಿಸುವ ಎಲ್ಲಾ ಬೀದಿ, ರಸ್ತೆಗಳ ಹೊಂಡ-ಗುಂಡಿಗಳನ್ನು ಮುಚ್ಚಿ ಡಾಮಾರು ಹಾಕಿ ಸುಗುಮ ಸಂಚಾರಕ್ಕೆ ಸಜ್ಜುಗೊಳಿಸಲಾಗಿದೆ.

ರಾಷ್ಟ್ರಪತಿಗಳ ಭೇಟಿಯ ಸಂದರ್ಭ ಉಡುಪಿ, ರಾ.ಹೆದ್ದಾರಿ ಹಾಗೂ ಕೊಲ್ಲೂರುಗಳಲ್ಲಿ ವಿಶೇಷ ದ್ರತೆಯನ್ನುಕೈಗೊಳ್ಳಲಾಗಿದೆ. ಉಡುಪಿಯಲ್ಲಿ1200 ಭದ್ರತಾ ಸಿಬ್ಬಂದಿಗಳು ಹಾಗೂ ಕೊಲ್ಲೂರಿನಲ್ಲಿ 600 ಮಂದಿಯನ್ನು ಭದ್ರತೆಗಾಗಿನಿಯೋಜಿಸಲಾಗಿದೆ.  ಭೇಟಿಯ ವೇಳೆ ರಾಷ್ಟ್ರಪತಿಗಳು ಸಂಚರಿಸುವ ಎಲ್ಲಾ ಬೀದಿ, ರಸ್ತೆಗಳ ಹೊಂಡ-ಗುಂಡಿಗಳನ್ನು ಮುಚ್ಚಿ ಡಾಮಾರು ಹಾಕಿ ಸುಗುಮ ಸಂಚಾರಕ್ಕೆ ಸಜ್ಜುಗೊಳಿಸಲಾಗಿದೆ.

ಭಕ್ತರಿಗೆ ನಿರ್ಬಂಧ: ಕೊಲ್ಲೂರಿನಲ್ಲಿ ನಾಳೆ ಬೆಳಗ್ಗೆ 10:00ರಿಂದ ಸಂಜೆ 6:00ಗಂಟೆಯವರೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ರಾಷ್ಟ್ರಪತಿಗಳು ಕೊಲ್ಲೂರಿನಿಂದ ನಿರ್ಗಮಿಸದ ಬಳಿಕವಷ್ಟೇ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇವಲ ಗುರುತು ಚೀಟಿ ಹೊಂದಿದವರಿಗೆ ಮಾತ್ರ ದೇವಸ್ಥಾನದೊಳಗೆ ಪ್ರವೇಶಿಸಲು ಅವಕಾಶ ಸಿಗಲಿದೆ.

ಆಸ್ಪತ್ರೆಗೆ ಶಿಲಾನ್ಯಾಸ: ರಾಷ್ಟ್ರಪತಿಗಳು ಶ್ರೀಕೃಷ್ಣನ ದರ್ಶನ ಹಾಗೂ ಪರ್ಯಾಯ ಪೇಜಾವರ ಶ್ರೀಗಳನ್ನು ಭೇಟಿಯಾದ ಬಳಿಕ ರಾಜಾಂಗಣದಲ್ಲಿ ಆಯೋಜಿಸಲಾದ ಎನ್‌ಆರ್‌ಐ ಉದ್ಯಮಿ ಬಿ.ಆರ್.ಶೆಟ್ಟಿ ಅವರ ಬಿಆರ್‌ಎಸ್ ಹೆಲ್ತ್ ಎಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈವೆಟ್ ಲಿ. ನಿರ್ಮಿಸುವ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೆ ಕೇವಲ ಆಮಂತ್ರಿತರಿಗೆ ಹಾಗೂ ಸಂಸ್ಥೆ ನೀಡಿದ ಗುರುತು ಚೀಟಿ ಹೊಂದಿದವರಿಗೆ ಮಾತ್ರ ಪ್ರವೇಶ ಸಿಗಲಿದೆ.

ಮುಖ್ಯಮಂತ್ರಿಗಳಿಲ್ಲ: ಕೃಷ್ಣಮಠದ ರಾಜಾಂಗಣದಲ್ಲಿ ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಗೈರುಹಾಜರಾಗಲಿದ್ದಾರೆ. ಈ ಮೂಲಕ ಮುಖ್ಯಮಂತ್ರಿಯಾಗಿ ಮಠಕ್ಕೆ ಭೇಟಿ ನೀಡುವುದನ್ನು ಮತ್ತೊಮ್ಮೆ ತಪ್ಪಿಸಿಕೊಂಡಂತಾಗುತ್ತದೆ. ಇದು ಮತ್ತೊಂದು ಸುತ್ತಿನ ವಿವಾದವನ್ನು ಹುಟ್ಟುಹಾಕಿಸುವ ಸಾಧ್ಯತೆ ಇದೆ.
   
ಉಳಿದಂತೆ ರಾಜ್ಯಪಾಲ ವಜುಭಾಯ್ ಆರ್. ವಾಲಾ, ಸಚಿವರಾದ  ಕೆ. ಆರ್.ರಮೇಶ್ ಕುಮಾರ್, ಕೆ.ಜೆ.ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಪೇಜಾವರ ಶ್ರೀಗಳು ಉಪಸ್ಥಿತರಿರುವರು. 
  
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News