ಗಾಂಜಾಮಾರಾಟ: 7ಕೆಜಿ ಗಾಂಜಾ ವಶಕ್ಕೆ
Update: 2017-06-17 21:32 IST
ಬೆಂಗಳೂರು, ಜೂ.17: ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ವೈಟ್‌ಫೀಲ್ಡ್ ಠಾಣೆ ಪೊಲೀಸರು, 7 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಒರಿಸ್ಸಾ ಮೂಲದ ನೀಲಕಂಠ(42), ವಿಲ್ಸನ್ ಗಾರ್ಡನ್‌ನ ನಿಝಾಮುದ್ದೀನ್(30) ಬಂಧಿತ ಆರೋಪಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.