IAS ರ್ಯಾಂಕ್ ವಿಜೇತ ನವೀನ್ ಭಟ್‌ರೊಂದಿಗೆ ಸಂವಾದ ಕಾರ್ಯಕ್ರಮ
ಮುರ್ಡೇಶ್ವರ, ಜೂ.17: IAS ರಾಷ್ಟ್ರ ಹಂತದಲ್ಲಿ 37ನೇ ಹಾಗೂ ರಾಜ್ಯ ಹಂತದಲ್ಲಿ 3ನೇ ರ್ಯಾಂಕ್ ಪಡೆದ ಡಾ.ನವೀನ್ ಭಟ್‌ರವರನ್ನು ಲಯನ್ಸ್ ಕ್ಲಬ್ ಮುರ್ಡೇಶ್ವರವು ಇತ್ತೀಚೆಗೆ ಗೌರವ ಪೂರ್ವಕವಾಗಿ ಸನ್ಮಾನಿಸಿತು. ಈ ವೇಳೆ ಡಾ.ನವೀನ್ ಭಟ್‌ರೊಂದಿಗೆ ಅವರ ಸಾಧನೆಯ ಕುರಿತಾದ ಸಂವಾದವನ್ನು ನಡೆಸಲಾಯಿತು.
ಪೋಷಕರು, ವಿದ್ಯಾರ್ಥಿಗಳಿಗೆ ಅವರನ್ನು ಪ್ರಶ್ನಿಸುವ ಮೂಲಕ ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿತ್ತು. ಡಾ. ಷರಾಫ್‌ರವರು ಇಂದಿನ ಸಮಸ್ಯೆಗಳಿಗೆ ನವೀನ್ ಭಟ್‌ರಿಂದ ತಮ್ಮ ಸೇವಾವಧಿಯಲ್ಲಿ ಹೇಗೆ ಪರಿಹಾರ ಸಿಗಬಹುದು ಎಂಬುದನ್ನು ತಮ್ಮ ಪ್ರಶ್ನೆಗಳ ಮೂಲಕ ಎಲ್ಲರಿಗೂ ತಿಳಿಸುವಲ್ಲಿ ಶಕ್ತರಾದರು. ಎಲ್ಲಾ ಪ್ರಶ್ನೆಗಳಿಗೆ ಡಾ.ನವೀನ್ ಭಟ್‌ರವರು ತಾಳ್ಮೆಯಿಂದ ಎಲ್ಲರಿಗೂ ಅರ್ಥವಾಗುವ ಶೈಲಿಯಲ್ಲಿ ಉತ್ತರಿಸಿದ್ದು ಎಲ್ಲರ ಗಮನ ಸೆಳೆಯಿತು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಡಾ.ನವೀನ್ ಭಟ್, ಲಯನ್ಸ್ ಕ್ಲಬ್ ಮುರ್ಡೇಶ್ವರದ ಅಧ್ಯಕ್ಷರಾದ ಡಾ.ವಾದಿರಾಜ ಭಟ್, ಲಯನ್ ಸದಸ್ಯರಾದ ಡಾ.ಆಯ್.ಆರ್.ಭಟ್, ಎಮ್.ವಿ ಹೆಗಡೆ ಉಪಸ್ಥಿತರಿದ್ದರು. ಡಾ.ವಾದಿರಾಜ ಭಟ್‌ರವರು ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನವನೀತ್ ಭಟ್ ಗೌರವಾನ್ವಿತರನ್ನು ಪರಿಚಯಿಸಿದರು. ಲಯನ್ ಸದಸ್ಯ ಡಾ.ಸುನೀಲ್ ವಂದಿಸಿದರು. ಲಯನ್ ಸದಸ್ಯ ನಾಗೇಶ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ಲಯನ್ಸ್ ಕ್ಲಬ್ ಮುರ್ಡೇಶ್ವರದ ಎಲ್ಲಾ ಸದಸ್ಯರು, ಊರಿನ ನಾಗರಿಕರು ಉಪಸ್ಥಿತರಿದ್ದರು.