ಅಮೆರಿಕದ ಯುದ್ಧ ನೌಕೆಗೆ ಸರಕು ಸಾಗಣೆ ಹಡಗು ಡಿಕ್ಕಿ: 7 ಮಂದಿ ಅಮೆರಿಕನ್ ನಾವಿಕರು ಸಮುದ್ರಪಾಲು

Update: 2017-06-17 16:22 GMT

ಯೊಕೊಸುಕಾ,ಜೂ.17: ಅಮೆರಿಕದ ಯುದ್ಧ ನೌಕೆಯೊಂದು ಶನಿವಾರ ಸರಕು ಸಾಗಣೆ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ, ಯುದ್ಧ ನೌಕೆಯ ಒಂದು ಭಾಗ ಜಖಂಗೊಂಡಿದ್ದು, ಅದರಲ್ಲಿದ್ದ ಏಳು ಮಂದಿ ಅಮೆರಿಕನ್ ನಾವಿಕರು ಸಮುದ್ರಪಾಲಾಗಿದ್ದ್ದಾರೆ.

   ಜಪಾನ್‌ನ ಪೆಸಿಫಿಕ್ ಕರಾವಳಿಯಲ್ಲಿ ನಸುಕ್ಖಿನಲ್ಲಿ ಈ ಅವಘಡ ಸಂಭವಿಸಿದ್ದು, ನಾಪತ್ತೆಯಾದ ಯೋಧರಿಗಾಗಿ ವಿಮಾನಗಳು, ದೋಣಿಗಳು ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ. ಯುದ್ಧ ನೌಕೆಯಲ್ಲಿದ್ದ ಕಮಾಂಡಿಂಗ್ ಅಧಿಕಾರಿ ಬ್ರೈಸ್ ಸೇರಿದಂತೆ ಇನ್ನೂ ಹಲವಾರು ನಾವಿಕರು ಗಾಯಗೊಂಡಿದ್ದು, ಅವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರ್ರೆಗೆ ಸಾಗಿಸಲಾಗಿದೆ.

ಅಮೆರಿಕದ ಯುದ್ಧ ನೌಕೆ ಫಿಟ್ಝ್ ಜೆರಾಲ್ಡ್ ಹಾಗೂ ಫಿಲಿಪ್ಪ್ಖೀನ್ಸ್‌ನ ಕಂಟೈನರ್ ನೌಕೆ ಎಸಿಎಕ್ಸ್ ಕ್ರಿಸ್ಟಲ್ ನಡುವೆ ನಸುಕಿನಲ್ಲಿ 2:30ರ ವೇಳೆಗೆ ನೈಋತ್ಯ ಟೋಕಿಯೊದ ಇಝು ಪರ್ಯಾಯದ್ವೀಪದ ಬಳಿಯ ಸಾಗರಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಹಡಗು, ನೌಕೆಗಳ ಸಂಚಾರದಟ್ಟಣೆಯಿರುವ ಈ ಸಾಗರಪ್ರದೇಶವು ಜಪಾನ್‌ನ ಯೊಕೊಹಾಮ ಹಾಗೂ ಟೊಕಿಯೋದಲ್ಲಿರುವ ಪ್ರಮುಖ ಬಂದರುಗಳ ಪ್ರವೇಶದ್ವಾರವಾಗಿದೆ.

 ಈ ಪ್ರದೇಶದಲ್ಲಿ ಹಡಗುಗಳ ಸಂಚಾರ ಅಧಿಕವಾಗಿದ್ದು, ಈ ಹಿಂದೆಯೂ ಇಲ್ಲಿ ಹಲವಾರಎು ಅವಘಡಗಳು ಸಂಭವಿಸಿದ್ದವು ಎಂದು ತಟರಕ್ಷಣಾ ದಳದ ಅಧಿಕಾರಿ ಯುತಾಕಾ ಸೈತೊ ತಿಳಿಸಿದ್ದಾರೆ.

222 ಮೀಟರ್ ವಿಸ್ತೀರ್ಣದ ಕಂಟೈನರ್ ಹಡಗು ಹಠಾತ್ತನೆ ತಿರುವು ತೆಗೆದಾಗ ಅವೆುರಿಕದ ಡಿಸ್ಟ್ರಾಯರ್ ಯುದ್ಧನೌಕೆಗೆ ಡಿಕ್ಕಿ ಹೊಡೆಯಿತೆಂದು ಎನ್‌ಎಚ್‌ಕೆ ಸುದ್ದಿವಾಹಿನಿ ವರದಿ ಮಾಡಿದೆ. ಆದರೆ ಈ ವರದಿಯನ್ನು ಕಂಟೈನರ್ ಹಡಗಿನ ಕ್ಯಾಪ್ಟನ್ ನಿರಾಕರಿಸಿದ್ದಾರೆ. ‘‘ನಮ್ಮ ನೌಕೆ ಹಾಗೂ ಅಮೆರಿಕದ ಯುದ್ಧ ನೌಕೆ ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದಾಐಗ ಪರಸ್ಪರ ಡಿಕ್ಕಿ ಹೊಡೆಯಿತೆಂದು’’ ಆತ ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News