ಬಂಟ್ವಾಳ; ಅರ್ಜಿ ಅಹ್ವಾನ

Update: 2017-06-17 16:38 GMT

ಬಂಟ್ವಾಳ,ಜೂ.17: ಪುರಸಭಾ ವ್ಯಾಪ್ತಿಯ 2017-18ನೆ ಸಾಲಿಗೆ ವಿವಿಧ ಯೋಜನೆಯಡಿ ಪುರಸಭಾ ವ್ಯಾಪ್ತಿಗೆ ಒಳಪಟ್ಟ ಅರ್ಹ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಶೇ. 24.10ರ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ಧನ, ಮನೆ ರಿಪೇರಿಗೆ ಸಹಾಯಧನ ಮತ್ತು ಸ್ವುದ್ಯೋಗಕ್ಕೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಶೇಕಡ 7.25ರ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕಾಗಿ 10ನೆ ತರಗತಿಗಿಂತ ಮೇಲ್ಪಟ್ಟ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕಡ್ಡಾಯವಾಗಿ ಬಿಪಿಎಲ್ ಕುಟುಂಬದ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಇಲ್ಲಿ ಅವಕಾಶ ಇರುವುದು. ಹಾಗೆಯೇ ಅವರು ಪಡೆದ ಅಂಕದ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.

ಶೇಕಡ 3ರ ಯೋಜನೆಯಡಿ ಘೋಷಣಾ ಭತ್ಯೆ ನೀಡಲು ಶೇ. 75ಕ್ಕಿಂತ ಹೆಚ್ಚಿನ ತೀವ್ರ ತರದ ವಿಕಲತೆ ಹೊಂದಿರುವ ಅಸಕ್ತ ಇನ್ನೊಬ್ಬರ ಅವಲಂಬನೆಯೊಂದಿಗೆ ಬದುಕುವವರಿಗೆ ಆಧ್ಯತೆನೀಡಲಾಗುತ್ತಿದೆ. ಅರ್ಜಿ ಸಲ್ಲಿಸಲು 2017ರ ಜುಲೈ 15 ಕೊನೆ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪುರಸಭಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News