×
Ad

ಅಬುಧಾಬಿ: ಅಲ್ ಸಿತಾರಾ ವತಿಯಿಂದ ಇಫ್ತಾರ್ ಸಮ್ಮಿಲನ

Update: 2017-06-17 22:22 IST

ಅಬುಧಾಬಿ,ಜೂ.17: ಅಲ್ ಸಿತಾರಾ ವತಿಯಿಂದ ಇಫ್ತಾರ್ ಸಮ್ಮಿಲನ  ಕಾರ್ಯಕ್ರಮವು ಅಬುಧಾಬಿಯ ಅಲ್ ಇಬ್ರಾಹಿಮಿ ರೆಸ್ಟೋರೆಂಟ್ ನಲ್ಲಿ ಅದ್ದೂರಿಯಾಗಿ ಜರುಗಿತು. ಸದಾ ಸಮಾಜಮುಖಿ ಕಾರ್ಯಗಳಿಂದ ಅನಿವಾಸಿ ಕನ್ನಡಿಗರ ನಡುವೆ ಚಿರಪರಿಚಿತರಾಗಿರುವ ಉದ್ಯಮಿ ಮುಹಮ್ಮದ್ ಅಕ್ರಮ್ ''ಅಲ್ ಸಿತಾರಾ ಕಾಂಟ್ರಾಕ್ಟಿಂಗ್ ಅಂಡ್ ಜನರಲ್ ಮೇಂಟೆನೆನ್ಸ್ ಕಂಪನಿ'' ಪ್ರತೀವರ್ಷ ಇಫ್ತಾರ್ ಸಮ್ಮಿಲನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.

ಅಲ್ ಸಿತಾರಾದ ವ್ಯವಸ್ಥಾಪಕ ನಿರ್ದೇಶಕ  ಮುಹಮ್ಮದ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಸಕ್ತ ಸಮಾಜದಲ್ಲಿ ಅನೈತಿಕತೆ,ಅಧಾರ್ಮಿಕತೆ ವ್ಯಾಪಕವಾಗಿ ಹಬ್ಬಿದೆ, ಉಪವಾಸವು ಮಾನವನನ್ನು ಎಲ್ಲಾ ರೀತಿಯ ದುಷ್ಟಗಳಿಂದ ತಡೆಗಟ್ಟುವ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಶುದ್ಧಗೊಳಿಸುತ್ತದೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅವನ ಮನಸ್ಸಿನಲ್ಲಿ ಹುಟ್ಟುಹಾಕುತ್ತದೆ ಎಂದು ನುಡಿದರು.

ಅನಿವಾಸಿ ಕನ್ನಡಿಗರ ಎಲ್ಲಾ ಕಾರ್ಯಕ್ರಮಗಳಲ್ಲಿ ಅಕ್ರಮ್ ರವರ ಸಹಕಾರ ಸಾನಿಧ್ಯವಿದ್ದೇ ಇರುತ್ತದೆ. ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅನಿವಾಸಿ ಕನ್ನಡಿಗಗಣ್ಯ ಅಥಿತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ ಸಿತಾರದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. 

 ಮುಹಮ್ಮದ್ ಸುಫಿಯಾನ್, ಮುಹಮ್ಮದ್ ಸಾದ್, ಮುಹಮ್ಮದ್ ಸಾಬಿಹ್, ತಾಹಿರ್ ಹುಸೇನ್, ಅಲ್ತಾಫ್ ಎಂ. ಎಸ್, ಇರ್ಫಾನ್, ಇಮ್ರಾನ್, ಅಹ್ಮದ್ ಹುಸೇನ್, ಅಬ್ದುಲ್ ರಹೀಮ್, ಸಲೀಂ ಶೈಖ್, ಮುನೀರ್ ಶೈಖ್, ಅಜ್ಮಲ್, ಕಮರುದ್ದೀನ್, ಲತೀಫ್ ಕೆ ಹೆಚ್ ಕಕ್ಕಿಂಜೆ, ರಶೀದ್, ಅಹ್ಮದ್ ಪರ್ವೇಜ್ , ಕಾಮಿಲ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಅಲ್ ಸಿತಾರದ ಉದ್ಯೋಗಿಗಳಾದ ಮುಹಮ್ಮದ್ ಇಲ್ಯಾಸ್, ಫೇಝ್ ಪಟೇಲ್, ಸೆಬಾಸ್ಟಿಯನ್, ಮೊಹಮ್ಮದ್ ಝಮಾನ್, ಫರಾಜ್ ಅಹ್ಮದ್, ರಾಶಿ, ಸಂತೋಷ್, ಇಂಜಿನಿಯರ್ ಗಳಾದ ಶಿವ ಪ್ರಸಾದ್, ಶಾಹೀದ್, ಸಿರಾಜ್, ಕಿಶೋರ್ , ನಸೀಮ್, ಮೊಹಮ್ಮದ್ ಮಜಿದಿ ಮುಂತಾದವರೂ ಈ ಇಫ್ತಾರ್ ಕೂಟದಯಶಸ್ಸಿಗೆ ಕಾರಣೀಭೂತರಾದರು.​

Writer - ಯಹ್ಯಾ ಅಬ್ಬಾಸ್ ಉಜಿರೆ

contributor

Editor - ಯಹ್ಯಾ ಅಬ್ಬಾಸ್ ಉಜಿರೆ

contributor

Similar News