ಪಾಕ್‌ಗೆ ಸೇನಾ ನೆರವು ಕಡಿತ: ಅಮೆರಿಕಕ್ಕೆ ಮೊಹಾಜಿರ್ ಕಾಂಗ್ರೆಸ್ ಮನವಿ
ವಾಶಿಂಗ್ಟನ್,ಜೂ.17: ಪಾಕಿಸ್ತಾನವು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದು, ಅದಕ್ಕೆ ತಕ್ಷಣವೇ ಸೇನಾ ಉಪಕರಣಗಳ ಮಾರಾಟ ಹಾಗೂ ನೆರವನ್ನು ಕಡಿತಗೊಳಿಸಬೇಕೆಂದು ಮೊಹಾಜಿರ್ (ವಿಭಜನೆಯ ವೇಳೆ ಭಾರತದಿಂದ ಪಾಕ್‌ಗೆ ವಲಸೆ ಹೋದವರು) ಸಂಘಟನೆಯೊಂದು ಟ್ರಂಪ್ ಆಡಳಿತ ಹಾಗೂ ಅವೆುರಿಕ ಕಾಂಗ್ರೆಸ್‌ಗೆ ಶನಿವಾರ ಮನವಿ ಮಾಡಿದೆ.
ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ಪಾಕಿಸ್ತಾನವು ಅಮೆರಿಕದ ಜೊತೆಗಾರನಲ್ಲವೆಂಬುದನ್ನು ಪಾಕ್ ಸೇನೆಯ ಕೃತ್ಯಗಳು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ’’ ಎಂದು ಇತ್ತೀಚೆಗೆ ಸ್ಥಾಪನೆಯಾದ ವಿಶ್ವ ಮೊಹಾಜಿರ್ ಕಾಂಗ್ರೆಸ್ ಸಂಘಟನೆಯು ಟ್ರಂಪ್ ಆಡಳಿತ ಹಾಗೂ ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದೆ.
ಅಮೆರಿಕವನ್ನು ವಂಚಿಸುವುದು ಹಾಗೂ ಹಕ್ಕಾನಿ, ತಾಲಿಬಾನ್, ಅಲ್‌ಖಾಯಿದಾಗಳಂತಹ ಉಗ್ರಗಾಮಿ ಸಂಘಟನೆಗಳನ್ನು ತುಷ್ಟೀಕರಿಸುವುದು ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಅನುಸರಿಸುತ್ತಿರುವ ನೀತಿಯಾಗಿದೆ ಎಂದು ಮನವಿ ಹೇಳಿದೆ. ಉಗ್ರಗಾಮಿಗಳನ್ನು ಹತ್ಯೆಗೈಯಲು ಪಾಕಿಸ್ತಾನ ನೆಲದೊಳಗೆ ಅಮೆರಿಕವು ಸೇನಾ ಕಾರ್ಯಾಚರಣೆ ನಡೆಸಬೇಕೆಂದು ಅದು ಆಗ್ರಹಿಸಿದೆ.