×
Ad

ನಾರಾಯಣ ಗುರು ಅರಿವು ಅಭಿಯಾನ

Update: 2017-06-18 14:15 IST

ಮಂಗಳೂರು, ಜೂ.18: ಮಂಗಳೂರು ವಿವಿ ನಾರಾಯಣ ಗುರು ಅಧ್ಯಯನ ಪೀಠ ಮತ್ತು ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರಗಳ ಆಶ್ರಯದಲ್ಲಿ ನಗರದ ಬಲ್ಮಠ ಸಹೋದಯ ಹಾಲ್‌ನಲ್ಲಿ ’ಗುರುವಿನ ಅರಿವು ಕಜ್ಜ’ವನ್ನು ನಡೆಯಿತು.

ಪೇರೂರು ಜಾರು ಅವರ ‘ಗುರುಕುಲೆ ಗುರು ನಾರಾಯಣ’ ಪುಸ್ತಕದ ಮೇಲೆ ಮಂಥನ ನಡೆಸಲಾಯಿತು. ಮಲಾರ್ ಜಯರಾಮ ರೈ ಗುರುಕುಲೆ ಗುರು ಪುಸ್ತಕದ ಬಗ್ಗೆ ಮಾತನಾಡಿ ‘ಮಹಾಕಾವ್ಯದ ಸಕಲ ಲಕ್ಷಣಗಳಿರುವ ಕೃತಿ ಇದಾಗಿದೆ. ಓದುತ್ತಿದ್ದಂತೆ ಕುತೂಹಲ ಕೆರಳಿಸುವ ಲಕ್ಷಣ ಇದರದ್ದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಸ್‌ಡಿ ನಿವೃತ್ತ ಧರ್ಮಾಧ್ಯಕ್ಷ ಡಾ.ಸಿ.ಎಲ್. ಪುರ್ಟಾಡೊ ಬಾಸೆಲ್ ಮಿಶನ್‌ರ ಸೇವೆ ಮತ್ತು ನಾರಾಯಣ ಗುರುಗಳ ಸೇವಾ ಸಮೀಕರಣವನ್ನು ವಿವರಿಸಿದರು. ಎನ್.ಪಿ.ಶೆಟ್ಟಿ, ಬಿ. ಎಂ. ರೋಹಿಣಿ, ಪ್ರಭಾಕರ ನೀರುಮಾರ್ಗ, ಪ್ರವೀಣ್ ಶೆಟ್ಟಿ ಮಾತನಾಡಿದರು. ವಾಸುದೇವ ಬೋಳೂರು, ಮೆಲ್ವಿಲ್ ಪಿಂಟೋ ದಿನೇಶ್ ಮೂಲ್ಕಿ, ತಿಮ್ಮಪ್ಪ ಪೂಜಾರಿ ಪಾಲ್ಗೊಂಡಿದ್ದರು.

ನಾರಾಯಣ ಗುರು ಅಧ್ಯಯನ ಪೀಠದ ಮುದ್ದು ಮೂಡುಬೆಳ್ಳೆ ಸ್ವಾಗತಿಸಿದರು. ರಮಾನಾಥ ಕೋಟೆಕಾರ್ ಗುರು ಪದ ಹಾಡಿದರು. ಬೆನೆಟ್ ಅಮ್ಮಣ್ಣ ಕಾರ್ಯಕರಮ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News