ಶಂಭು ಶೆಟ್ಟಿ ಸ್ಮರಣಾರ್ಥ ಹಾಜಿ ಅಬ್ದುಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರಾಷ್ಟ್ರಪತಿಯಿಂದ ಶಂಕುಸ್ಥಾಪನೆ

Update: 2017-06-18 09:52 GMT

ಉಡುಪಿ, ಜೂ.18: ಶಂಭು ಶೆಟ್ಟಿ ಸ್ಮರಣಾರ್ಥ ಹಾಜಿ ಅಬ್ದುಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಶ್ರೀ ಕೃಷ್ಣ ಮಠದ  ರಾಜಾಂಗಣದಲ್ಲಿ ರಾಷ್ಟ್ರಪತಿ  ಪ್ರಣವ್ ಮುಖರ್ಜಿ ನೆರವೇರಿಸಿದರು.

ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಕರ್ನಾಟಕ ಸರಕಾರದ ಆರೋಗ್ಯ ಸಚಿವರಾದ  ಕೆ.ಆರ್.ರಮೇಶ್, ಬೆಂಗಳೂರು ನಗರಾಭಿವೃದ್ಧಿ ಸಚಿವ  ಕೆ.ಜೆ.ಜಾರ್ಜ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಹಾಗೂ ಬೆಂಗಳೂರಿನ  ಬಿ.ಆರ್.ಎಸ್. ಹೆಲ್ತ್ & ರಿಸರ್ಚ್ಇನ್ಸ್ಟಿಟ್ಯೂಟಿನ ಡಾ. ಸಿ.ಆರ್.ಶೆಟ್ಟಿ ಹಾಗೂ ಡಾ.ಬಿ.ಆರ್.ಶೆಟ್ಟಿ ದಂಪತಿ ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಮಠಕ್ಕೆ ಭೇಟಿ: ಶ್ರೀ ಕೃಷ್ಣ ಮಠಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಭೇಟಿ ನೀಡಿದರು. ಮಠದ ಮುಖ್ಯ ದ್ವಾರದಲ್ಲಿ  ಮಠದ ದಿವಾನರಾದ  ರಘುರಾಮ ಆಚಾರ್ಯರು ರಾಷ್ಟ್ರಪತಿಯನ್ನು ಸ್ವಾಗತಿಸಿದರು. ನಂತರ ದೇವರ ದರ್ಶನ ಮಾಡಿದ ಪ್ರಣವ್ ಮುಖರ್ಜಿಯವರಿಗೆ ಪರ್ಯಾಯ ಶ್ರೀ ವಿಶ್ವೇಶ ತೀರ್ಥ  ಸ್ವಾಮೀಜಿಯವರು ಶಾಲು ಹೊದಿಸಿ,  ದೇವರ ಪ್ರಸಾದ ನೀಡಿ, ಮಂಟಪದಲ್ಲಿ ಬೆಳ್ಳಿಯ ಕೃಷ್ಣನ ಪ್ರತಿಮೆಯ ಸ್ಮರಣಿಕೆ ಕೊಟ್ಟು ಗೌರವಿಸಿದರು.

ಈ ಸಂದರ್ಭ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥಸ್ವಾಮೀಜಿ, ಪೇಜಾವರ ಕಿರಿಯ ಮಠಾಧೀಶ ಶ್ರೀ  ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥಸ್ವಾಮೀಜಿ, ಸೋದೆ  ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥಸ್ವಾಮೀಜಿ  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News