×
Ad

ಆಮ್ ಆದ್ಮಿ ಕಚೇರಿ ಮುಂದೆ ಕುಮಾರ್ ವಿಶ್ವಾಸ್ ವಿರುದ್ಧ ಪೋಸ್ಟರ್!

Update: 2017-06-18 15:24 IST

ಹೊಸದಿಲ್ಲಿ,ಜೂ. 18: ದಿಲ್ಲಿಯಲ್ಲಿ ಆಮ್‌ಆದ್ಮಿ ಪಾರ್ಟಿ ಕಚೇರಿ ಮುಂದೆ ಕುಮಾರ್ ವಿಶ್ವಾಸ್ ವಿರುದ್ಧ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ‘ಬಿಜೆಪಿಗೆ ಪ್ರಿಯವ್ಯಕ್ತಿ’ ಎಂದು ಪಾರ್ಟಿಯ ಹಿರಿಯ ನಾಯಕ ಕುಮಾರ್‌ವಿಶ್ವಾಸ್ ವಿರುದ್ಧ ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ. ಕಳೆದ ದಿವಸ ಆಪ್‌ನದ್ದೇ ಇನ್ನೊಬ್ಬ ನಾಯಕ ದಿಲೀಪ್ ಪಾಂಡೆ ವಿಶ್ವಾಸ್ ವಿರುದ್ಧ ಟೀಕೆ ಮಾಡಿದ್ದರು.

ರಾಜಸ್ಥಾನದ ಹೊಣೆಗಾರನಾಗಿರುವ ವಿಶ್ವಾಸ್ ಕಾಂಗ್ರೆಸ್‌ನ್ನು ಟೀಕಿಸುತ್ತಾರೆ. ಆದರೆ ಅಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಯಾಕೆ ಟೀಕಿಸುವುದಿಲ್ಲ ಎಂದು ದಿಲೀಪ್ ಪಾಂಡೆ ನಿನ್ನೆ ಆರೋಪಿಸಿದ್ದರು. ದಿಲ್ಲಿನಗರ ಸಭೆಯ ಆಮ್‌ಆದ್ಮಿಪಾರ್ಟಿ ಸೋತ ಬೆನ್ನಿಗೆ ಓಕ್ಲಾ ಶಾಸಕ ಅಮಾನತುಲ್ಲಾ ಖಾನ್ ವಿಶ್ವಾಸ್‌ರನ್ನು ಟೀಕಿಸಿದ್ದರು.

ವಿಶ್ವಾಸ್ ಬಿಜೆಪಿಯ ಏಜೆಂಟ್ ಅಗಿದ್ದಾರೆ. ಅಧಿಕಾರ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಶ್ವಾಸ್ ವಿರುದ್ಧ ಅಮಾನತ್ತುಲ್ಲಾ ಖಾನ್ ಆರೋಪ ಹೊರಿಸಿದ್ದರು. ಅಮಾನತ್ತುಲ್ಲಾರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಈಗ ವಿಶ್ವಾಸ್ ವಿರುದ್ಧ ಪೋಸ್ಟರ್ ಗಳು ಪ್ರತ್ಯಕ್ಷವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News